Saturday, February 4, 2023

Latest Posts

ಜನರ ಬದುಕಿಗೆ ಬದಲಾವಣೆ ತಂದ ಖರ್ಗೆಗೆ ಅಭಿನಂದನಾ ಸಮಾವೇಶ: ಡಿ.ಕೆ.ಶಿ.

ಹೊಸ ದಿಗಂತ ವರದಿ, ಕಲಬುರಗಿ:

ಕಲ್ಯಾಣ ಕನಾ೯ಟಕ ಭಾಗದ ಜನರ ಬದುಕಿಗೆ ಬದಲಾವಣೆ ತಂದು ಕೊಟ್ಟಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೆ೯ ಅವರು ಡಿ.10ರಂದು ಜನ್ಮ ಕೊಟ್ಟ ನಾಡು ಕಲಬುರಗಿಗೆ ಆಗಮಿಸುತ್ತಿದ್ದು,ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಹಾಗೂ ಶಕ್ತಿ ತುಂಬುವಲ್ಲಿ ಖಗೆ೯ ಅವರ ಅಪಾರ ಕೊಡುಗೆ ಇದೆ.ಹೀಗಾಗಿ ಡಿ.10 ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದರು.

ಈ ಭಾಗದಿಂದ ಹೆಚ್ಚಿನ ಶಾಸಕರು ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಅನ್ಯಾಯ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಬೇಕಾದ ಹಣವನ್ನು ಈ ಭಾಗಕ್ಕೆ ನೀಡುತ್ತಿಲ್ಲ ಎಂದು ದೂರಿದ ಅವರು,ನಮ್ಮ ಉದ್ದೇಶ ಬದುಕು.ಆದರೆ ಬಿಜೆಪಿ ಅವರ ಉದ್ದೇಶ ಬರೀ ಭಾವನೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಸಕಾ೯ರದ ಈ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾಯಾ೯ಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಎಂ.ಬಿ.ಪಾಟೀಲ್,ಅಜಯ್ ಸಿಂಗ್,ಎಂ.ವೈ.ಪಾಟೀಲ್, ರಹೀಮ ಖಾನಾ, ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!