ಚನ್ನರಾಯಪಟ್ಟಣದಲ್ಲಿ 60 ಹಸುಗಳ ಮಾರಣಹೋಮ: ಆರೋಪಿ ಇರ್ಷಾದ್ ಬಂಧನ

ಹೊಸದಿಗಂತ ವರದಿ, ಹಾಸನ:

ಗೋಮಾಂಸ ಮಾರಾಟಕ್ಕಾಗಿ 60 ಕ್ಕೂ ಹೆಚ್ಚು ರಾಸುಗಳನ್ನು ಹತ್ಯೆಗೈದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಹಾಸನ ಪ್ರಾಣಿದಯಾ ಸಂಘ ನೀಡಿದ ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಪ್ರಮುಖ ಆರೋಪಿ ಇರ್ಷಾದ್ ಮೊಹೀದ್ ಎಂಬಾತನನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹತ್ತು ಸಾವಿರ ಕೆ.ಜಿ. ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಐದು ಸಿಂಧಿ ಹಸುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದಾರೆ.

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ಮೊಹಮ್ಮದ್ ಅಬ್ದುಲ್ ಹಕ್ ಎಂಬುವರಿಗೆ ಸೇರಿದ ಜಾಗದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ, ಚರ್ಮ ಸುಲಿದು ನೇತು ಹಾಕಲಾಗಿತ್ತು. ಮಾಂಸ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಪೊಲೀಸರು ದಾಳಿ ನಡೆಸಿ, ದಂಧೆಯನ್ನು ತಡೆದಿದ್ದಾರೆ.

ಕೆರೆಗೆ ಹರಿದ ರಕ್ತ

ಹಸುಗಳನ್ನು ಹತ್ಯೆಗೈದು ಅವುಗಳ ರಕ್ತವನ್ನು ಹತ್ತಿರದ ಅಮಾನಿಕೆರೆಗೆ ಹರಿಸುತ್ತಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ. ರಕ್ತವಲ್ಲದೆ ಮಾಂಸ ಶುಚಿಗೊಳಿಸುವ ಕೊಳಚೆ ನೀರು ಕೂಡ ಈ ಕೆರೆ ಸೇರುತ್ತಿತ್ತು. ಜಾಗದ ಮಾಲೀಕನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗ್ರಾಮದ ಅದೇವತೆ ವಳಗೇರಮ್ಮ ದೇವಾಲಯದ ಸಮೀಪದಲ್ಲಿಯೇ ಗೋವುಗಳ ವಧೆ ನಡೆಯುತ್ತಿದ್ದುದು ವಿಪರ್ಯಾಸವೇ ಸರಿ. ನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಘುಪತಿ ನೇತೃತ್ವದಲ್ಲಿ ಬಾಗೂರು ರಸ್ತೆಯ ರೋಷನ್ ನಗರದ ಇರ್ಷಾದ್‌ಗೆ ಸೇರಿದ ಶೆಡ್ ಮೇಲೆ ದಾಳಿ ಮಾಡಿದಾಗ ಈ ದಂಧೆ ಬಹಿರಂಗವಾಗಿದೆ. ವಶಪಡಿಸಿಕೊಂಡ ಹತ್ತು ಸಾವಿರ ಕೆಜಿ ಗೋಮಾಂಸವನ್ನು ಪೊಲೀಸರು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದ್ದಾರೆ.

ಇದೇ ಮೊದಲಲ್ಲ… 
ಚನ್ನರಾಯಪಟ್ಟಣ ನಗರದ ಬಾಗೂರು ರಸ್ತೆಯ ಗ್ರಾಮ ದೇವತೆ ವಳಗೇರಮ್ಮನವರ ದೇವಸ್ಥಾನದ ಸಮೀಪವೇ ಹಸುಗಳ ಮಾರಣಹೋಮ ನಡೆದಿದೆ. ಇದು ಮೊದಲ ಬಾರಿಯಲ್ಲ. ಈ ಹಿಂದೆ ಹಲವು ಬಾರಿ ಇದೇ ಸ್ಥಳದಲ್ಲಿ ಪೊಲೀಸರು ಅಕ್ರಮ ಗೋಮಾಂಸ ವಶಪಡಿಸಿಕೊಂಡಿದ್ದಾರೆ, ಗೋವುಗಳನ್ನು ರಕ್ಷಿಸಿದ್ದಾರೆ. ಆದರೂ ಇದೇ ಜಗದಲ್ಲಿ ಗೋಹತ್ಯೆ ನಡೆಯುತ್ತಿದೆ. ಗೋಮಾಂಸ ಸಾಗಣೆಯಾಗುತ್ತಿದೆ. ಈ ದಂಧೆಗೆ ಪ್ರಭಾವಿಗಳ ಬೆಂಬಲ ಕೂಡ ಇದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಯಾವುದೇ ಪರವಾನಗಿ ಇಲ್ಲದೆ ಇರ್ಷಾದ್ ಮೊಹೀದ್ ಬೆಂಗಳೂರು, ಮೈಸೂರು, ಕೇರಳ ಸೇರಿದಂತೆ ಹಲವು ಸ್ಥಳಗಳಿಗೆ ರವಾನೆ ಮಾಡುತ್ತಿರುವುದು ಗೊತ್ತಾಗಿದೆ.

ಈ ಕುರಿತು ಮಾಹಿತಿತ್ ನೀಡಿದ ಚನ್ನರಾಯಪಟ್ಟಣ ನಗರ ಠಾಣೆ ಇನ್‌ಸ್ಪೆಕ್ಟರ್ ರಘುಪತಿ ಅವರು, ಠಾಣೆಗೆ ಬಂದ ಖಚಿತ ಮಾಹಿತಿಯಿಂದ ಅಧಿಕಾರಿಗಳೊಂದಿಗೆ ಶುಕ್ರವಾರ ಬೆಳಗ್ಗೆ 5 ಗಂಟೆಗೆ ರೋಷನ್ ನಗರದ ಮೇಲೆ ದಾಳಿ ಮಾಡಿದಾಗ ಗೋವುಗಳ ವಧೆ ಮಾಡಿರುವುದು ಬೆಳಕಿಗೆ ಬಂದಿದೆ. ಇಂತಹ ಕೃತ್ಯ ಮುಂದುವರಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

26 ಸಿಂಧಿ ರಾಸುಗಳ ರಕ್ಷಣೆ
ಇನ್ನೊಂದು ಘಟನೆಯಲ್ಲಿ ಅಕ್ರಮವಾಗಿ ಖಸಾಯಿಖಾನೆಗೆ ಸಾಗಿಸುತ್ತಿದ್ದ ೨೬ ಸಿಂಧಿ ಕರುಗಳನ್ನು ಚನ್ನರಾಯಪಟ್ಟಣ ಪೊಲೀಸರು ರಕ್ಷಿಸಿದ್ದಾರೆ. ಚನ್ನರಾಯಪಟ್ಟಣ-ಮೈಸೂರು ರಸ್ತೆಯಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಮೈಸೂರು ಕಡೆಗೆ ಈ 26 ಸಿಂ ಕರುಗಳನ್ನು ಸಾಗಿಸಲಾಗುತ್ತಿತ್ತು. ಶುಕ್ರವಾರ ಬೆಳಿಗಿನ ಜಾವ 4.30ರ ಸಮಯದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ಪಿಕ್‌ಅಪ್ ವಾಹನದಲ್ಲಿ ಜನುವಾರುಗಳನ್ನು ಖಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಪಿಎಸ್‌ಐ ಭರತ್‌ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಾಲಕ ಪರಾರಿಯಾಗಿದ್ದು ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕರುಗಳನ್ನು ಮೈಸೂರಿನ ಪಿಂಜರಾಪೊಲ್‌ಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!