July 28, 2026
Tuesday, July 28, 2026
spot_img

ಚಪಾತಿ, ಅನ್ನಕ್ಕೆ ಸೂಪರ್ ಕಾಂಬಿನೇಷನ್: ಹೀಗೆ ಮಾಡಿ ರುಚಿಯಾದ ನುಗ್ಗೆ ಸೊಪ್ಪಿನ ದಾಲ್

ನುಗ್ಗೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನುಗ್ಗೆ ಸೊಪ್ಪನ್ನು ಬಳಸಿ ರುಚಿಕರವಾದ ಮತ್ತು ಸುಲಭವಾದ ದಾಲ್ ಫ್ರೈಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಮಾಗ್ರಿಗಳು

ತೊಗರಿ ಬೇಳೆ / ಹೆಸರು ಬೇಳೆ

ನುಗ್ಗೆ ಸೊಪ್ಪು

ಈರುಳ್ಳಿ

ಟೊಮೆಟೊ

ಹಸಿ ಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಅರಿಶಿನ ಪುಡಿ

ಖಾರದ ಪುಡಿ

ಧನಿಯಾ ಪುಡಿ

ಸಾಸಿವೆ ಮತ್ತು ಜೀರಿಗೆ

ಒಣ ಮೆಣಸಿನಕಾಯಿ

ಎಣ್ಣೆ ಅಥವಾ ತುಪ್ಪ

ಉಪ್ಪು

ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

ತೊಗರಿ ಬೇಳೆ ಅಥವಾ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು, ಸ್ವಲ್ಪ ಅರಿಶಿನ ಮತ್ತು ನೀರು ಹಾಕಿ ಕುಕ್ಕರ್‌ನಲ್ಲಿ 3-4 ವಿಷಲ್ ಕೂಗಿಸಿ ಮೆತ್ತಗೆ ಬೇಯಿಸಿಕೊಳ್ಳಬೇಕು. ನಂತರ ಒಂದು ಕಡಾಯಿಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ. ಸಾಸಿವೆ, ಜೀರಿಗೆ ಮತ್ತು ಒಣ ಮೆಣಸಿನಕಾಯಿ ಹಾಕಿ ಸಿಡಿಸಿ. ನಂತರ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು. ಬಳಿಕ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಬಾಡಿಸಿ. ನಂತರ ಖಾರದ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಸಾಲೆಗೆ ಬಿಡಿಸಿಟ್ಟ ನುಗ್ಗೆ ಸೊಪ್ಪನ್ನು ಸೇರಿಸಿ. ಮಧ್ಯಮ ಉರಿಯಲ್ಲಿ 3-4 ನಿಮಿಷಗಳ ಕಾಲ ಸೊಪ್ಪು ಚೆನ್ನಾಗಿ ಬಾಡುವವರೆಗೆ ಹುರಿಯಬೇಕು. ಸೊಪ್ಪು ಬೆಂದ ನಂತರ, ಮೊದಲೇ ಬೇಯಿಸಿಟ್ಟುಕೊಂಡ ಬೇಳೆಯನ್ನು ಇದಕ್ಕೆ ಸುರಿದು, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಕೈಯಾಡಿಸಿ 5 ನಿಮಿಷಗಳ ಕಾಲ ಕುದಿಸಿ. ಕೊನೆಯಲ್ಲಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಬಿಸಿಬಿಸಿಯಾದ ನುಗ್ಗೆ ಸೊಪ್ಪಿನ ದಾಲ್ ಫ್ರೈ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !