ಇಂದಿನಿಂದ ಚಾರ್​ಧಾಮ್ ಯಾತ್ರೆ ಆರಂಭ, ಕೇದರನಾಥ ದರುಶನಕ್ಕೆ ಏಳು ಲಕ್ಷ ನೋಂದಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಂದೂಗಳ ವಿಶೇಷವಾದ ಚಾರ್‌ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಿದೆ. 6 ತಿಂಗಳಿಗೊಮ್ಮೆ ಈ ಯಾತ್ರಾ ಸ್ಥಳಗಳ ಬಾಗಿಲು ತೆರೆಯಲಿದ್ದು, ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.

Uttarakhand's Char Dham Yatra to begin in April | Times of India Travelಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಇಂದು ಬೆಳಗ್ಗೆ 7 ಗಂಟೆಗೆ ತೆರೆಯಲಿವೆ. ಮಧ್ಯಾಹ್ನ 12.20ಕ್ಕೆ ಗಂಗೋತ್ರಿ ದೇವಾಲಯವು ತೆರೆಯುತ್ತದೆ. ಮೇ 12 ರಂದು ಬೆಳಗ್ಗೆ 6 ಗಂಟೆಗೆ ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯ ಭಾಗವಾಗಿರುವ ಬದರಿನಾಥ್ ಅನ್ನು ತೆರೆಯಲಾಗುತ್ತದೆ.

Chardham Yatra Route Map: The Ultimate Travel Guide | SOTCದರುಶನಕ್ಕೆ ಏಪ್ರಿಲ್​ 15ರಿಂದ  ಆನ್​ಲೈನ್ ನೋಂದಣಿ ಪ್ರಾರಂಭವಾಗಿದ್ದು, ಈಗ ಜೂನ್ ತಿಂಗಳವರೆಗೆ ಲಭ್ಯವಿದೆ. ಮೇ ತಿಂಗಳಲ್ಲಿ ಬುಕಿಂಗ್ ಫುಲ್ ಆಗಿವೆ. ಈ ಬಾರಿ 7 ಲಕ್ಷ 41 ಸಾವಿರಕ್ಕೂ ಹೆಚ್ಚು ಮಂದಿ ಕೇದಾರನಾಥ ಯಾತ್ರೆಗೆ ಹೆಸರು ನೋಂದಾಯಿಸಿದ್ದಾರೆ. ಬದರಿನಾಥ್​ 7 ಲಕ್ಷ 38 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿಗೆ ಕ್ರಮವಾಗಿ 38 ಲಕ್ಷ ಮತ್ತು 33 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

Chardham Yatra from Karnatakaನೋಂದಣಿ ಇಲ್ಲದೆ ಯಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಮೇ8ರಿಂದ ಆಫ್​ಲೈನ್​ ನೋಂದಣಿ ಸೌಲಭ್ಯ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!