ಕಸ್ಟಮ್ಸ್‌ ಅಧಿಕಾರಿಗಳ ಬಲೆಗೆ ಬಿದ್ದ ದುಬಾರಿ ವಾಚ್‌ಗಳ ದಂಧೆಕೋರ: 27ಕೋಟಿ ಮೌಲ್ಯದ ವಜ್ರಖಚಿತ ವಾಚ್‌ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದುಬೈನಿಂದ ದುಬಾರಿ ವಾಚ್‌ಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕನೊಬ್ಬನನ್ನು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆತನ ಬಳಿಯಿದ್ದ ಏಳು ಕೈಗಡಿಯಾರಗಳು, 27 ಕೋಟಿ ಮೌಲ್ಯದ ʻಜಾಕೋಬ್ ಆ್ಯಂಡ್ ಕೋʼ ವಜ್ರಖಚಿತ ಬಿಳಿ ಚಿನ್ನದ ವಾಚ್‌ ಮತ್ತು ಐಫೋನ್ 14 ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹28.17 ಕೋಟಿ ಎಂದು ಅಂದಾಜಿಸಲಾಗಿದೆ.

Delhi Airport Man Smuggling Wrist Watches Rs 27.09 Cr Customs Bracelet Gold Diamond IGI India Dubai Flight

ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ಸುಂಕವನ್ನು ತಪ್ಪಿಸಲು ಕಳ್ಳಸಾಗಣೆ ಮಾಡಲಾಗುತ್ತಿದೆ. ಅಮೆರಿಕದ ಆಭರಣ ವ್ಯಾಪಾರಿ ಮತ್ತು ವಾಚ್‌ಮೇಕರ್ ಜಾಕೋಬ್ ಆಂಡ್ ಕಂಪನಿ ತಯಾರಿಸಿದ ವಾಚ್ ಚಿನ್ನದಿಂದ ಮಾಡಲ್ಪಟ್ಟಿದ್ದು ವಜ್ರದ ಹರಳುಗನ್ನು ಹೊಂದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕ ಅಕ್ಟೋಬರ್ 4 ರಂದು ದುಬೈನಿಂದ ದೆಹಲಿಗೆ ಬಂದಿದ್ದು, ಆತನ ಚಲನವಲನಗಳ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು ಆತನ ಲಗೇಜ್‌ಗಳನ್ನು ಪರಿಶೀಲಿಸಿದರು. ಇದರ ಪರಿಣಾಮವಾಗಿ ಐದು ರೋಲೆಕ್ಸ್ ಆಯ್ಸ್ಟರ್ ವಾಚ್‌ಗಳು, ಪಿಯಾಗೆಟ್ ಲೈಮ್‌ಲೈಟ್ ಸ್ಟೆಲ್ಲಾ ವಾಚ್, ಕಸ್ಟಮೈಸ್ ಮಾಡಿದ ಜಾಕೋಬ್ ಅಂಡ್ ಕಂಪನಿಯ ವಜ್ರದಿಂದ ಕೂಡಿದ ವಾಚ್ ಮತ್ತು ಐಫೋನ್ 14 ಪ್ರೊ (256 ಜಿಬಿ) ವಶಪಡಿಸಿಕೊಳ್ಳಲಾಗಿದೆ.

ಜಾಕೋಬ್ & ಕೋ ವಾಚ್ ವಶಪಡಿಸಿಕೊಂಡ ಸರಕುಗಳ ಒಟ್ಟು ಮೌಲ್ಯದ ದೊಡ್ಡ ಭಾಗವಾಗಿದೆ. ಪಿಯಾಗೆಟ್ ವಾಚ್‌ನ ಮೌಲ್ಯ ಸುಮಾರು ₹30 ಲಕ್ಷ ಮತ್ತು ಇತರ ವಾಚ್‌ಗಳ ಮೌಲ್ಯ ₹15 ಲಕ್ಷ ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿಯಲ್ಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅದೇ ಕಾಯಿದೆಯ ಸೆಕ್ಷನ್ 104 ರ ಅಡಿಯಲ್ಲಿ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!