ಅಮೆರಿಕದ ವೈದ್ಯಕೀಯ ಪರವಾನಗಿ ಪರೀಕ್ಷೆ ಪಾಸ್‌ ಮಾಡಬಲ್ಲದು ಚಾಟ್‌ಜಿಪಿಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಕ್ರೋಸಾಫ್ಟ್‌ ಬೆಂಬಲಿತ ಕೃತಕ ಬುದ್ಧಿಮತ್ತೆ(Artificial Intelligence) ಸಂಸ್ಥೆ ಓಪನ್‌ ಎಐ (OpenAI) ಹೊರತಂದಿರೋ ಚಾಟ್‌ಬೋಟ್‌ ʼಚಾಟ್ ಜಿಪಿಟಿʼ (ChatGPT) ಬಗ್ಗೆ ನೀವು ಕೇಳಿರಬಹುದು. ತನ್ನಲ್ಲಿ ತುಂಬಿಸಿರೋ ಮಾಹಿತಿಯನ್ನಾಧರಿಸಿ ಮನುಷ್ಯರಂತೆ ತಾನೇ ಸ್ವತಃ ಯೋಚಿಸಿ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಈ ಕೃತಕ ಬುದ್ಧಿಮತ್ತೆಯಾಧಾರಿತ ಚಾಟ್‌ಬಾಟ್‌ ಇದೀಗ ಜಾಗತಿಕವಾಗಿ ಭಾರೀ ಚರ್ಚೆಯಲ್ಲಿದೆ. ಪ್ರಪಂಚದಾದ್ಯಂತ ಚಾಟ್‌ಜಿಪಿಟಿ ಬಳಕೆದಾರರು ದಿನದಿನವೂ ಹೆಚ್ಚುತ್ತಿದ್ದು ಗೂಗಲ್‌ ಅನ್ನು ಹಿಂದಿಕ್ಕಿ ಈ ಯಾಂತ್ರೀಕೃತ ವ್ಯವಸ್ಥೆಯೇ ಭವಿಷ್ಯದಲ್ಲಿ ಮನ್ನಣೆ ಗಳಿಸಬಹುದು ಎಂಬ ಚರ್ಚೆಗಳು ನಡೆಯುತ್ತಿರೋ ಹೊತ್ತಲ್ಲಿ ಇನ್ನೊಂದು ವಿಷಯವು ಜಗತ್ತಿನ ಜನರನ್ನು ದಂಗಾಗಿಸಿದೆ. ಅದೇನೆಂದರೆ ಅಮೆರಿಕದ ವೈದ್ಯಕೀಯ ಪರೀಕ್ಷೆಯನ್ನು ಪಾಸ್‌ ಮಾಡಬಲ್ಲ ಸಾಮರ್ಥ್ಯ ಚಾಟ್‌ಜಿಪಿಟಿಗೆ ಇದೆ ಎಂಬುದು.

ಇತ್ತೀಚೆಗಷ್ಟೇ ಅಮೆರಿಕದ ಕಾನೂನು ಶಾಲೆಯ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ ಉತ್ತೀರ್ಣವಾಗಿರೋ ಸುದ್ದಿಗಳು ಬಿತ್ತರವಾಗಿದ್ದವು. ಇದೀಗ ವೈದ್ಯಕೀಯ ಪರವಾನಗಿ ಪರೀಕ್ಷೆಯಲ್ಲಿಯೂ ಚಾಟ್‌ಜಿಪಿಟಿ ಉತ್ತೀರ್ಣವಾಗಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದು ಸಾಬೀತಾಗಿದೆ. ಅಮೆರಿಕದ ಸಂಶೋಧಕರಾದ ಟಿಫನಿ ಕುಂಗ್‌ ಮತ್ತು ವಿಕ್ಟರ್‌ ಸೆಂಗ್‌ ಈ ಕುರಿತು ಅಧ್ಯಯನ ವರಿಯೊಂದನ್ನು ಪ್ರಕಟ ಪಡಿಸಿದ್ದು ಚಾಟ್‌ಜಿಪಿಟಿಯು ಯುನೈಟೆಡ್ ಸ್ಟೇಟ್ಸ್ ವೈದ್ಯಕೀಯ ಪರವಾನಗಿ ಪರೀಕ್ಷೆ (USMLE) ಯಲ್ಲಿ 60 ಪ್ರತಿಶತದಷ್ಟು ಉತ್ತೀರ್ಣ ಅಂಕ ಗಳಿಸಬಹುದು ಎಂದು ಬಹಿರಂಗಪಡಿಸಿದ್ದಾರೆ. ಇದು ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳಂತೆಯೇ ಸುಸಂಬದ್ಧವಾದ, ತಾರ್ಕಿಕ ಅರ್ಥವನ್ನು ಹೊಂದಿರುವ ಉತ್ತರಗಳನ್ನು ನೀಡಬಲ್ಲುದು ಎಂದು ಸಂಶೋಧಕರು ಹೇಳಿದ್ದಾರೆ.

ಜೀವರಸಾಯನಶಾಸ್ತ್ರದಿಂದ ಹಿಡಿದು ರೋಗನಿರ್ಣಯದ ತಾರ್ಕಿಕತೆ, ಜೈವಿಕ ನೀತಿಶಾಸ್ತ್ರದವರೆಗೆ ವ್ಯಾಪಕವಾಗಿ ವಿಸ್ತರಿಸುವ ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಚಾಟ್‌ಜಿಪಿಟಿ ಬಹಳ ಉತ್ತಮ ಉತ್ತರಗಳನ್ನು ನೀಡುತ್ತದೆ. ಮೂರು USMLE ಪರೀಕ್ಷೆಗಳಲ್ಲಿ ChatGPT ಶೇಕಡಾ 52.4 ಮತ್ತು 75.0 ರಷ್ಟು ಅಂಕಗಳನ್ನು ಗಳಿಸಿದೆ. ಉತ್ತೀರ್ಣರಾಗಲು ಅಗತ್ಯವಿರುವ 60 ಶೇಕಡಾದಷ್ಟು ಅಂಕಗಳನ್ನು ಇದು ಗಳಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!