Friday, March 24, 2023

Latest Posts

HEALTH| ಬಾಣಂತಿಯರಿಗೆ ಕಾಡುವ ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಗೆ ಕಾರಣವೇನು ?

ಮದುವೆಯಾದ ನಂತರ ಜೀವನ ಹೇಗಿರುತ್ತದೆ, ಮಕ್ಕಳಾದ ನಂತರ ಜೀವನ ಹೇಗಿರುತ್ತದೆ? ಎರಡಕ್ಕೂ ತುಂಬಾನೇ ವ್ಯತ್ಯಾಸ ಇದೆ, ಯಾವುದಕ್ಕೂ ಯಾರನ್ನೂ ಕೇಳದೇ ಹೇಗೆ ಬೇಕೋ ಹಾಗೆ ಇರುವ ವ್ಯಕ್ತಿಗೆ ಮಕ್ಕಳಾದ ನಂತರ ಅಷ್ಟೆಲ್ಲಾ ಸ್ವಾತಂತ್ರ್ಯ ಇರುವುದಿಲ್ಲ. ಮಕ್ಕಳ ಬಗ್ಗೆ ಸದಾ ಆಲೋಚನೆ ಮಾಡಬೇಕಾಗುತ್ತದೆ. ಕೆಲವರಲ್ಲಿ ಬಾಣಂತನದಲ್ಲಿ ಪೋಸ್ಟ್ ಪಾರ್ಟಮ್ ಖಿನ್ನತೆ ಕಾರಣವಾಗುತ್ತದೆ.. ಯಾಕೆ? ಇದರ ಲಕ್ಷಣಗಳೇನು ಇಲ್ಲಿದೆ ಮಾಹಿತಿ..

  • ಮಡಿಲಿನಲ್ಲಿ ಮಗು ಇದ್ದರೂ ಮುಖದಲ್ಲಿ ಖುಷಿ ಇಲ್ಲ, ಒಂದು ರೀತಿ ದುಃಖದ ಛಾಯೆ
  • ಒಂದು ನಿಮಿಷ ನಗು ಬಂದರೆ ಮತ್ತೊಂದು ನಿಮಿಷ ಮೌನ, ಸಾಕಷ್ಟು ಮೂಡ್ ಸ್ವಿಂಗ್ಸ್
  • ಯಾವಾಗಲೂ, ಎಲ್ಲ ವಿಷಯಕ್ಕೂ ಅಳು ಬರುವುದು
  • ಮಗುವಿನ ಜತೆ ಬಾಂಧವ್ಯ ಬೆಳೆಸಿಕೊಳ್ಳಲು ಇಷ್ಟಪಡದಿರುವುದು.
  • ಕುಟುಂಬದವರು ಹಾಗೂ ಸ್ನೇಹಿತರ ಜತೆ ಮಾತನಾಡಲು ಇಷ್ಟಪಡದೇ ಇರುವುದು.
  • ಊಟದಲ್ಲಿ ಆಸಕ್ತಿ ಇಲ್ಲ, ಹಸಿವೇ ಆಗದಿರುವುದು
  • ನಿದ್ದೆ ಬಾರದೇ ಇರುವುದು, ಅಥವಾ ಏಳಲು ಮನಸಾಗದೇ ಇರುವುದು.
  • ಏನು ಮಾಡದಿದ್ದರೂ ಸುಸ್ತು, ನಿರುತ್ಸಾಹ.
  • ಮುಂಚೆ ಇಷ್ಟಪಡುತ್ತಿದ್ದ ವಿಷಯ ಇದೀಗ ಇಷ್ಟವಾಗದೇ ಇರೋದು.
  • ತಕ್ಷಣ ಕೋಪ ಬರೋದು, ಎಲ್ಲದಕ್ಕೂ ಇರಿಟೇಟ್ ಆಗೋದು.
  • ನಾನು ಒಳ್ಳೆ ತಾಯಿ ಆಗಲಾರೆ ಎನ್ನುವ ಭಯ
  • ಜೀವನದಲ್ಲಿ ಭರವಸೆಯೇ ಕಾಣದಿರುವುದು.
  • ಸರಿಯಾದ ನಿರ್ಧಾರ ಮಾಡಲು, ಸೂಕ್ತ ರೀತಿಯಲ್ಲಿ ಆಲೋಚನೆ ಮಾಡಲು ಆಗದಿರುವುದು.
  • ಆಂಕ್ಸೈಟಿ, ಪ್ಯಾನಿಕ್ ಅಟ್ಯಾಕ್
  • ಸ್ವತಃ ಅಥವಾ ಮಗುವಿಗೆ ಹಾನಿ ಮಾಡುವ ಆಲೋಚನೆ ಬರುವುದು
  • ಆತ್ಮಹತ್ಯೆ ಯೋಚನೆ

    ವೈದ್ಯರನ್ನು ಯಾವಾಗ ಕಾಣಬೇಕು?

  • ಈ ಭಾವನೆಗಳು ಎರಡು ವಾರಕ್ಕಿಂತ ಹೆಚ್ಚು ಇದ್ದರೆ
  • ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ ಎನಿಸಿದರೆ
  • ಮಗುವಿನ ಕಾಳಜಿ ಮಾಡೋಕೆ ಆಗೋದಿಲ್ಲ ಅನಿಸಿದರೆ
  • ಯಾವುದೇ ಕೆಲಸ ಮಾಡೋದಕ್ಕೂ ಕಷ್ಟ ಎನಿಸಿದರೆ
  • ಮಗು ಅಥವಾ ನಿಮಗೆ ಹಾನಿ ಮಾಡಿಕೊಳ್ಳುವ ಆಲೋಚನೆ ಬಂದರೆ

ಈ ಎಲ್ಲ ಮಾಹಿತಿ ಇಂಟರ್ನೆಟ್ ಆಧರಿಸಿ ಬರೆಯಲಾಗಿದೆ, ಹೆಚ್ಚಿನ ಮಾಹಿತಿಗೆ ವೈದ್ಯರನ್ನು ಸಂಪರ್ಕಿಸಿ

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!