Tuesday, March 28, 2023

Latest Posts

ಈ ಉದ್ಯೋಗಗಳನ್ನು ರಿಪ್ಲೇಸ್‌ ಮಾಡಬಲ್ಲುದು ಚಾಟ್‌ಜಿಪಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೃತಕ ಬುದ್ಧಿಮತ್ತೆ ಚಾಟ್‌ ಬೋಟ್ ಚಾಟ್‌ ಜಿಪಿಟಿ‌ (ChatGPT) ಯ ನೂತನ ಅವತರಣಿಕೆಯನ್ನು ಓಪನ್‌ ಎಐ (OpenAI) ಹೊರತಂದಿದ್ದು ಜಿಪಿಟಿ-4 ಎಂದು ಕರೆಯಲ್ಪಡುವ ಈ ವರ್ಷನ್‌ ಈಗ ಭಾರೀ ಸದ್ದು ಮಾಡುತ್ತಿದೆ. ಈ ಹೊಸ ಮಾದರಿಯು ಅದರ ಹಿಂದಿನ ವರ್ಷನ್‌ GPT-3 ಗಿಂತ ಹೆಚ್ಚು ಅತ್ಯಾಧುನಿಕ ಮತ್ತು ಉತ್ತಮವಾಗಿದೆ ಎಂದು ಅದರ ಸೃಷ್ಟಿಕರ್ತ ಓಪನ್‌ ಎಐ (OpenAI) ಹೇಳಿದೆ. ಇದೊಂದು ದೊಡ್ಡ ಮಲ್ಟಿಮೋಡಲ್ ಮಾದರಿಯಾಗಿದ್ದು ಅದು ವಿವಿಧ ಕಾರ್ಯಗಳಲ್ಲಿ ಮಾನವ ತರಹದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ ಎನ್ನಲಾಗಿದೆ.

ಮೂರು ಮಹತ್ವದ ಕ್ಷೇತ್ರಗಳಾದ ಸೃಜನಶೀಲತೆ, ದೃಶ್ಯ ಗ್ರಹಿಕೆ ಮತ್ತು ಸಂದರ್ಭ ನಿರ್ವಹಣೆಯಲ್ಲಿ GPT-4 ಹೆಚ್ಚು ಮುಂದುವರಿದಿದೆ ಎಂದು OpenAI ಹೇಳಿಕೊಂಡಿದೆ.ಇದು ಸಂಗೀತ, ಚಿತ್ರಕಥೆಗಳು, ತಾಂತ್ರಿಕ ಬರವಣಿಗೆ ಮುಂತಾದ ವಿಷಯದಲ್ಲಿ ಒಬ್ಬ ಸೃಜನಶೀಲ ಬರಹಗಾರನ ರೀತಿಯಲ್ಲಿಯೇ ಕಾರ್ಯನಿರ್ವಹಿಸಬಲ್ಲುದು ಎನ್ನಲಾಗುತ್ತಿದೆ.

ಚಾಟ್‌ಜಿಪಿಟಿಯ ಈ ಸಾಮರ್ಥ್ಯವು ಕೆಲ ಮಾನವ ಉದ್ಯೋಗಕ್ಕೆ ಕುತ್ತಾಗಿ ಪರಿಣಮಿಸಬಹುದು ಎಂಬ ಕುರಿತು ವಿಶ್ಲೇಷಣೆಗಳಾಗುತ್ತಿವೆ. ಸಿನೆಮಾ ನಟ ಪ್ರಶಾಂತ್‌ ರಂಗಸ್ವಾಮಿ ಇತ್ತೀಚೆಗೆ ಟ್ವೀಟ್‌ ಒಂದರಲ್ಲಿ ಮುಂದಿನ ದಿನಗಳಲ್ಲಿ ಚಾಟ್‌ಜಿಪಿಟಿ ರೀಪ್ಲೇಸ್‌ ಮಾಡಬಲ್ಲ ಉದ್ಯೋಗಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಡೇಟಾ ಎಂಟ್ರಿ ಕ್ಲರ್ಕ್, ಗ್ರಾಹಕ ಸೇವಾ ಪ್ರತಿನಿಧಿ, ಪ್ರೂಫ್ ರೀಡರ್, ಪ್ಯಾರಾಲೀಗಲ್, ಬುಕ್‌ಕೀಪರ್, ಅನುವಾದಕ, ಕಾಪಿರೈಟರ್, ಮಾರುಕಟ್ಟೆ ಸಂಶೋಧನಾ ವಿಶ್ಲೇಷಕ, ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ, ಅಪಾಯಿಂಟ್‌ಮೆಂಟ್ ಶೆಡ್ಯೂಲರ್, ಟೆಲಿಮಾರ್ಕೆಟರ್, ವರ್ಚುವಲ್ ಅಸಿಸ್ಟೆಂಟ್, ಟ್ರಾನ್ಸ್‌ಕ್ರಿಪ್ಷನಿಸ್ಟ್, ಬೋಧಕ, ತಾಂತ್ರಿಕ ಬೆಂಬಲ ವಿಶ್ಲೇಷಕ, ಇಮೇಲ್ ಮಾರ್ಕೆಟರ್,‌ ಕಂಟೆಂಟ್‌ ಮಾರ್ಕೆಟರ್ ಮುಂತಾದ ಉದ್ಯೋಗಗಳು ಇದರಲ್ಲಿ ಸೇರಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!