Wednesday, March 29, 2023

Latest Posts

VIRAL VIDEO| RC15 ಸೆಟ್‌ನಲ್ಲಿ 100 ಡ್ಯಾನ್ಸರ್‌ಗಳೊಂದಿಗೆ ಪ್ರಭುದೇವ `ನಾಟು ನಾಟು’ ಸ್ಟೆಪ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದಲ್ಲದೆ ಆಸ್ಕರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಪಡೆದ ‘ನಾಟು ನಾಟು’ಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದು, ಈ ಕ್ರಮದಲ್ಲಿ ಭಾರತೀಯ ಮೈಕಲ್ ಜಾಕ್ಸನ್ ಪ್ರಭುದೇವ ಕೂಡ ಶುಭ ಹಾರೈಸಿದ್ದಾರೆ.

ಪ್ರಭುದೇವ ಪ್ರಸ್ತುತ ರಾಮ್ ಚರಣ್ ಅವರ ಆರ್‌ಸಿ 15 ಚಿತ್ರದ ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ಶೆಡ್ಯೂಲ್‌ನಲ್ಲಿ ಚರಣ್ ಮತ್ತು ಕಿಯಾರಾ ಅವರ ಜೊತೆಗೆ 100ಕ್ಕೂ ಹೆಚ್ಚು ಡ್ಯಾನ್ಸರ್‌ಗಳೊಂದಿಗೆ ಹಾಡನ್ನು ಚಿತ್ರೀಕರಿಸಲಾಗುತ್ತದೆ. ಆರ್‌ಸಿ15 ಶೂಟಿಂಗ್ ಸೆಟ್‌ನಲ್ಲಿ ನೃತ್ಯಗಾರರೊಂದಿಗೆ ಪ್ರಭುದೇವ ಹಾಡನ್ನು ಡೈರೆಕ್ಟ್‌ ಮಾಡುವಾಗ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ನಾಟು-ನಾಟುಗೆ ಹೆಜ್ಜೆ ಹಾಕಿದರು. ಹೂಮಾಲೆ ಹಾಕಿ, ಕೇಕ್ ಕಟ್ ಮಾಡಿದರಲ್ಲದೆ, ಪ್ರಭುದೇವ 100 ಮಂದಿ ನೃತ್ಯಗಾರರೊಂದಿಗೆ ನಾಟು ನಾಟು ಹೆಜ್ಜೆ ಹಾಕುವ ಮೂಲಕ ಚರಣ್‌ಗೆ ಗೌರವ ಸಲ್ಲಿಸಿದರು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನ ಮಾಡುತ್ತಿದ್ದು ಆರ್‌ಸಿ 15 ತಮಿಳಿನ ಸ್ಟಾರ್ ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು ಈ ಚಿತ್ರಕ್ಕೆ ಕಥೆ ನೀಡುತ್ತಿದ್ದಾರೆ. ದಿಲ್ ರಾಜು ನಿರ್ಮಾಣದ ಈ ಚಿತ್ರಕ್ಕೆ ಥಮನ್ ಸಂಗೀತ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!