ಎರಡೇ ತಿಂಗಳಲ್ಲಿ 100 ಮಿಲಿಯನ್‌ ಬಳಕೆದಾರರನ್ನು ಹೊಂದಿದೆ ಚಾಟ್‌ಜಿಪಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಗತ್ತಿನ ಟೆಕ್‌ ಕ್ಷೇತ್ರದಲ್ಲೀಗ ಕೃತಕ ಬುದ್ಧಿಮತ್ತೆ (Artificial intelligence) ಚಾಟ್‌‌ ಬೋಟ್ ʼChatGPTʼ (ಚಾಟ್‌ಜಿಪಿಟಿ) ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅಮೆರಿಕ ಮೂಲದ ಓಪನ್‌ ಎಐ (OpenAI) ಸಂಸ್ಥೆ ನಿರ್ಮಿಸಿರೋ ಈ ಚಾಟ್‌ ಬೋಟ್‌ ಅನ್ನು ವಿಶ್ವದಾದ್ಯಂತ ಜನರು ನೆಚ್ಚಿಕೊಳ್ಳುತ್ತಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಗಳಿಸಿಕೊಳ್ಳುವ ಮೂಲಕ ಚಾಟ್‌ಜಿಪಿಟಿಯು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಲೆಯುತ್ತಿರುವ ಅಪ್ಲಿಕೇಷನ್‌ ಎಂದೆನಿಸಿದೆ.

ಬಿಡುಗಡೆಯಾದ ಎರಡೇ ತಿಂಗಳಲ್ಲಿ ಈ ಚಾಟ್‌ಜಿಪಿಟಿಯು ಬರೋಬ್ಬರಿ 100 ಮಿಲಿಯನ್‌ ಬಳಕೆದಾರರನ್ನು ಹೊಂದಿದೆ. ಸಿಮಿಲರ್‌ವೆಬ್‌ನ ವರದಿಯ ಪ್ರಕಾರ, ಜನವೆರಿ ತಿಂಗಳಿನಲ್ಲಿ ಚಾಟ್‌ಜಿಪಿಟಿಯು ಹೆಚ್ಚು ಪ್ರಸಿದ್ಧಿಗಳಿಸಿದ್ದು ಒಂದೇ ದಿನದಲ್ಲಿ ಬರೋಬ್ಬರಿ 13 ಮಿಲಿಯನ್‌ ಬಳಕೆದಾರರನ್ನು ಗಳಿಸಿದೆ. ಈಗಾಗಲೇ ಬಹಳಷ್ಟು ಜನಪ್ರಿಯತೆ ಗಳಿಸಿರುವ ಇನ್‌ಸ್ಟಾಗ್ರಾಂ, ಟಿಕ್‌ಟಾಕ್‌ ಗಳೂ ಕೂಡ 100ಮಿಲಿಯನ್‌ ಬಳಕೆದಾರರನ್ನು ಪಡೆಯಲು ವರ್ಷಗಟ್ಟಲೇ ಸಮಯವನ್ನು ತೆಗೆದುಕೊಂಡಿದೆ. ಆದರೆ ಚಾಟ್‌ಜಿಪಿಟಿ ಕೇವಲ ಎರಡೇ ತಿಂಗಳಲ್ಲಿ ಇದನ್ನು ಸಾಧಿಸಿದೆ.

ಇದೇ ರೀತಿಯ ವೆಬ್ ಅಂದಾಜಿನ ಪ್ರಕಾರ, chat.openai.com ವೆಬ್‌ಸೈಟ್ ಕಳೆದ ವಾರದಲ್ಲಿ ಸುಮಾರು 25 ಮಿಲಿಯನ್ ದೈನಂದಿನ ಸಂದರ್ಶಕರನ್ನು ಆಕರ್ಷಿಸಿದೆ. ಕಳೆದ ತಿಂಗಳಿನಿಂದ, ಸೈಟ್‌ಗೆ ದಟ್ಟಣೆಯು ದಿನಕ್ಕೆ ಸರಾಸರಿ 3.4% ರಷ್ಟು ಹೆಚ್ಚಾಗಿದೆ. ಜನವರಿ 31 ರ ಗರಿಷ್ಠ ಟ್ರಾಫಿಕ್ ದಾಖಲಾಗಿದ್ದು ಒಂದೇದಿನದಲ್ಲಿ ಸೈಟ್‌ ಗೆ 28 ಮಿಲಿಯನ್ ಜನರು ಭೇಟಿನೀಡಿದ್ದಾರೆ.

ಇದರಿಂದಾಗಿ ಗೂಗಲ್‌ ನಂತಹ ಕಂಪನಿಗಳಿಗೆ ಆತಂಕ ಸೃಷ್ಟಿಯಾಗಿದ್ದು ಅವುಗಳೂ ಕೂಡ ಕೃತಕಬುದ್ಧಿಮತ್ತೆಯ ವಿಷಯದಲ್ಲಿ ಕೆಲಸ ಮಾಡುವುದಾಗಿ ಘೋಷಿಸಿವೆ. AI ಇಂದು ನಾವು ಕೆಲಸ ಮಾಡುತ್ತಿರುವ ಅತ್ಯಂತ ಆಳವಾದ ತಂತ್ರಜ್ಞಾನವಾಗಿದೆ” ಎಂದು ಪಿಚೈ ಇತ್ತೀಚೆಗೆ ಮಾತನಾಡಿದ್ದಾರೆ. ಚೀನಾದ Baidu ಕೂಡ ತನ್ನ ಸ್ವಂತ ChatGPT-ಪ್ರತಿಸ್ಪರ್ಧಿಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!