Saturday, April 1, 2023

Latest Posts

VIRAL VIDEO| ಬುಲ್ಡೋಜರ್ ಮೇಲೆ ನವ ಜೋಡಿ ಮೆರವಣಿಗೆ: ವೀಕ್ಷಿಸಲು ಜನವೋ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಸಮಾರಂಭದ ಅಂಗವಾಗಿ ವಧು-ವರರು ಕಾರು, ಇತರೆ ವಾಹನ, ಕುದುರೆ ಗಾಡಿಗಳಲ್ಲಿ ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬರುತ್ತಾರೆ. ಆದರೆ, ಗುಜರಾತಿನ ನವಜೋಡಿಯೊಂದು ವಿನೂತನವಾಗಿ ಕಲ್ಯಾಣ ಮಂಟಪಕ್ಕೆ ಜೆಸಿಬಿಯಲ್ಲಿ ಮೆರವಣಿಗೆ ಬಂದಿದ್ದಾರೆ.  ಗುಜರಾತ್ ರಾಜ್ಯದ ನವಸಾರಿ ಜಿಲ್ಲೆಯ ಕಲ್ಯಾರಿ ಗ್ರಾಮದ ಕಯೂರ್ ಪಟೇಲ್ ಎಂಬ ಯುವಕ ಚೆಲುವಿನ ಕೆಯೂರ್ ಪಟೇಲ್ ಕಲ್ಯಾಣ ಮಂಟಪಕ್ಕೆ ಜೆಸಿಬಿಯಲ್ಲಿ ಬಂದಿದ್ದಾರೆ.

ಕುಟುಂಬ ಸದಸ್ಯರು ಗೆಳೆಯರೊಂದಿಗೆ ಸೇರಿ ಜೆಸಿಬಿಗೆ ಹೂವಿನ ಅಲಂಕಾರ ಮಾಡಿ ಜೆಸಿಬಿ ಮುಂಭಾಗದಲ್ಲಿರುವ ವೊಬಾಕ್ಸ್‌ನಲ್ಲಿ ಸೋಫಾವನ್ನು ಇರಿಸಿ ಮತ್ತು ಬಿಸಿಲನ್ನು ತಡೆಯಲು ವೊಬಾಕ್ಸ್‌ನ ಮೇಲೆ ಮೇಲಾವರಣ ಕುಟುಂಬ ಸದಸ್ಯರೊಂದಿಗೆ ಮೆರವಣಿಗೆಯಲ್ಲಿ ಮದುವೆ ಮಂಟಪ ತಲುಪಿದರು.

ಮದುವೆ ಬಳಿಕ ಪತ್ನಿ ಸಮೇತ ಅದೇ ಜೆಸಿಬಿಯಲ್ಲಿ ಮೆರವಣಿಗೆಯಲ್ಲಿ ಸ್ವಗ್ರಾಮಕ್ಕೆ ತೆರಳಿದ್ದರು. ನವವಿವಾಹಿತರನ್ನು ಬುಲ್ಡೋಜರ್ ಮೇಲೆ ಮೆರವಣಿಗೆ ಮಾಡುವುದನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಜೆಸಿಬಿ ಮುಂದೆ ಬಂಧು ಮಿತ್ರರು ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವುಗಳನ್ನು ನೋಡಿದ ನೆಟ್ಟಿಗರು ಕೆಯೂರ್ ಪಟೇಲ್ ಅವರ ಐಡಿಯಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!