Thursday, March 30, 2023

Latest Posts

ಇನ್ಮುಂದೆ ಭಾರತದಲ್ಲೂ ಲಭ್ಯ ಚಾಟ್‌ಜಿಪಿಟಿ ಪ್ಲಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಗತ್ತಿನಾದ್ಯಂತ ಸದ್ದು ಮಾಡ್ತಿರೋ ಕೃತಕ ಬುದ್ಧಿಮತ್ತೆ (AI) ಚಾಟ್‌ಬೋಟ್‌ ಚಾಟ್‌ಜಿಪಿಟಿ (ChatGPT)ಯ ಪ್ಲಸ್‌ ಚಂದಾದಾರಿಕೆ ಇನ್ಮುಂದೆ ಭಾರತದಲ್ಲೂ ಲಭ್ಯವಾಗಲಿದೆ. ಚಾಟ್‌ಜಿಪಿಟಿ ಪ್ಲಸ್ ಚಂದಾದಾರಿಕೆ ಈಗ ಭಾರತದಲ್ಲಿ ಲಭ್ಯವಿದೆ ಎಂದು ಚಾಟ್‌ಬಾಟ್‌ನ ಸೃಷ್ಟಿಕರ್ತ ಓಪನ್‌ಎಐ (OpenAI) ಇಂದು ಟ್ವೀಟ್‌ನಲ್ಲಿ ತಿಳಿಸಿದೆ.

ತಿಂಗಳಿಗೆ 20 ಡಾಲರ್‌ ವೆಚ್ಚದಲ್ಲಿ OpenAI ಫೆಬ್ರವರಿಯಲ್ಲಿ ChatGPT ಪ್ಲಸ್ ಚಂದಾದಾರಿಕೆಯನ್ನು ಪ್ರಾರಂಭಿಸಿತು. ಈ ಚಂದಾದರಿಕೆಯು ವೇಗದ ಪ್ರತಿಕ್ರಿಯೆ ಮತ್ತು ಚಾಟ್‌ ಬೋಟ್‌ ನ ನೂತನ ವೈಶಿಷ್ಟ್ಯಗಳನ್ನು ಚಂದಾದಾರರಿಗೆ ನೀಡುತ್ತದೆ. ಅಲ್ಲದೇ ಬೇಡಿಕೆ ಹೆಚ್ಚಿದ್ದರೂ ಚಂದಾದಾರಿಕೆ ಹೊಂದಿರುವವರು AI ಚಾಟ್‌ಬಾಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಇಷ್ಟುದಿನ ಕೆಲವೊಮ್ಮೆ ಬಳಕೆದಾರರ ಸಂಖ್ಯೆ ಹೆಚ್ಚಿದಾಗ ಚಾಟ್‌ಬಾಟ್‌ ಬ್ಯೂಸಿ ಎಂದು ತೋರಿಸುತ್ತಿತ್ತು. ಅದರೊಂದಿಗೆ ವ್ಯವಹರಿಸಲು ಕೆಲಸ ಸಮಯ ಕಾಯಬೇಕಾಗಿತ್ತು. ಚಂದಾದಾರಿಕೆ ಹೊಂದಿರುವವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ.

ಪ್ರಸ್ತುತ ಚಂದಾದಾರಿಕೆಯು ಭಾರತದಲ್ಲಿ ಲಭ್ಯವಿದೆ ಎಂದು OpenAI ಹೇಳಿದ್ದು ಚಂದಾದಾರಿಕೆಯ ಪ್ರಯೋಜನಗಳನ್ನು ಆನಂದಿಸಲು ಬಳಕೆದಾರರು ತಿಂಗಳಿಗೆ ಡಾಲರ್‌ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಕೆಲವರು ಈಗಾಗಲೇ ಚಂದಾದಾರಿಕೆ ಪಡೆಯಲು ಯತ್ನಿಸಿದ್ದು ಪಾವತಿ ವೈಫಲ್ಯ ಎದರುರಿಸಿರುವುದಾಗಿ ಹೇಳಿದ್ದಾರೆ. ಇನ್ಮುಂದೆ ಭಾರತೀಯ ಮಾರುಕಟ್ಟೆಯಲ್ಲಿಯೂ ಚಾಟ್‌ಜಿಪಿಟಿ ಪ್ಲಸ್‌ ಸದ್ದು ಮಾಡಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!