ವಿಶ್ವ ನಿದ್ರಾ ದಿನ : ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ರೆ ಬರ್ತಿಲ್ವಾ ? ಹಾಗಾದ್ರೆ ಈ ಸಲಹೆಗಳನ್ನು ಪಾಲಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದಿನವೆಲ್ಲಾ ಕೆಲಸದಲ್ಲಿ ಮುಳುಗಿ ದಣಿವಾದ ದೇಹಕ್ಕೆ ವಿಶ್ರಾಂತಿ ಎನ್ನುವುದು ತುಂಬಾನೆ ಮುಖ್ಯ. ಈ ಒತ್ತಡದ ಬದುಕಿಗೆ ವಿರಾಮ ತೆಗೆದುಕೊಳ್ಳಲು ನಿದ್ರೆಗೆ ಜಾರುವುದು ಅಗತ್ಯ ಮತ್ತು ಅನಿವಾರ್ಯವೂ ಹೌದು. ಹೀಗಿರುವಾಗ ರಾತ್ರಿ ಹಾಸಿಗೆ ಮೇಲೆ ಮಲಗಿದಾಗ ನಿದ್ರೆ ಬರದಿದ್ದರೆ ಏನು ಮಾಡುವುದು ಅಲ್ವಾ?.. ಈ ರೀತಿಯ ಸಮಸ್ಯೆ ನಿಮಗೂ ಕಾಡುತ್ತಿದೆಯಾ ಹಾಗಾದ್ರೆ ಈ ಸರಳ ಸೂತ್ರಗಳನ್ನು ಪಾಲಿಸಿ, ರಾತ್ರಿ ಬಹಳ ಬೇಗನೆ ನಿದ್ರೆ ಬರುತ್ತದೆ.

* ನಿದ್ರೆಗೆ ತೊಂದರೆ ಕೊಡುವಂತಹ ಅಂಶಗಳನ್ನು ದೂರ ಇಡಿ. ಅಂದರೆ ತಿಗಣೆ ಸೊಳ್ಳೆ ಮಾತ್ರವಲ್ಲ, ಮೊಬೈಲ್‌, ದೀಪಗಳು, ಕಂಪ್ಯೂಟರ್ ಬೆಳಕು, ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ನಿಮ್ಮ ನಿದ್ದೆಯ ನಿಜವಾದ ಶತ್ರುಗಳು ಹಾಗಾಗಿ ಅವುಗಳಿಂದ ದೂರವಿದ್ರೆ ಬಹಳ ಬೇಗನೆ ನಿದ್ರೆ ಆವರಿಸುತ್ತದೆ.

* ನಿಮ್ಮ ಬೆಡ್ ರೂಂ ನಲ್ಲಿ ಆದಷ್ಟು ಕತ್ತಲು ಆವರಿಸುವಂತೆ ನೋಡಿಕೊಳ್ಳಿ. ಕತ್ತಲೆಯಲ್ಲಿ ನಿದ್ರಿಸಿದಾಗ ನಿಮ್ಮ ದೇಹದಲ್ಲಿ ಕೆಲವು ಹಾರ್ಮೋನುಗಳು ಉತ್ಪತ್ತಿಯಾಗುತ್ತೆ. ಅವು ನಿಮ್ಮನ್ನ ಆರೋಗ್ಯವಂತರನ್ನಾಗಿರಲು ನೆರವಾಗುತ್ತೆ ಅನ್ನೋದು ನೆನಪಿರಲಿ.

* ಸಮಯಕ್ಕೆ ಸರಿಯಾಗಿ ತಿನ್ನುವ ಹವ್ಯಾಸ ಈಗಿನ ಯುವಜನತೆಯಲ್ಲಿ ಕಡಿಮೆಯಾಗಿದೆ. ಹೊತ್ತಲ್ಲದ ಹೊತ್ತಲ್ಲಿ ಆಹಾರ ಸೇವಿಸುವುದು ನಿಮ್ಮ ನಿದ್ದೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತೆ. ಅಷ್ಟೇ ಅಲ್ಲ ಪೌಷ್ಟಿಕ ಆಹಾರದ ಅಗತ್ಯವೂ ನಿದ್ದೆಗಿದೆ. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಿ.

* ನಿಮ್ಮ ಆಹಾರದಲ್ಲಿ ವಿಟಮಿನ್, ಮಿನರಲ್ ಗಳನ್ನು ಸರಿಯಾಗಿ ಸೇರಿಸಿದರೆ ನಿದ್ದೆ ಬೇಗನೆ ಬರುತ್ತೆ. ರಾತ್ರಿ ಮಲಗುವಾಗ ಬಿಸಿ ಹಾಲು ಕುಡಿದು ಮಲಗುವ ಅಭ್ಯಾಸ ಒಳ್ಳೆಯದು. ಯಾರು ರಾತ್ರಿ ಏನನ್ನೂ ತಿನ್ನದೇ ಮಲಗ್ತಾರೋ ಅಂತವರಿಗೂ ಕೂಡ ನಿದ್ದೆ ಬರೋದಿಲ್ಲ.

* ರಾತ್ರಿ ಮಲಗುವ ಮುನ್ನ ಹಾರರ್ ಮೂವಿ ನೋಡುವ ಹವ್ಯಾಸ, ಆಕ್ಷನ್ ಮೂವಿ ನೋಡುವ ಚಟವಿದ್ದರೆ ಇಂದೇ ಬಿಟ್ಟುಬಿಡಿ. ಇಲ್ಲಾಂದ್ರೆ ಹಾಸಿಗೆಯಲ್ಲಿ ಎಷ್ಟು ಹೊತ್ತು ಮಲಗಿದ್ರೂ ನಿದ್ದೆ ಆವರಿಸದೇ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದರಿಂದ ಈ ಚಟದಿಂದ ದೂರವಿರಿ.

* ಮಲಗುವ ಮುನ್ನ ನೀವು ಲೈಟ್ ಮ್ಯೂಸಿಕ್ ಕೇಳುವ ಅಭ್ಯಾಸ ಬೆಳೆಸಿಕೊಂಡ್ರೆ ಓಕೆ..ರಾತ್ರಿಯ ಹೊತ್ತು ಹಾಸಿಗೆಗೆ ಬರುವ ಮುನ್ನ ಕಾಮಿಡಿ ಕಾರ್ಯಕ್ರಮವನ್ನು ನೋಡಿ. ಮನೆಮಂದಿಯ ಜೊತೆ ಚೆನ್ನಾಗಿ ನಕ್ಕುನಲಿದು ಸಮಯ ಕಳೆದು ಹಾಸಿಗೆಗೆ ಹೋಗಿ ಕೂಡಲೆ ಕಣ್ಣಿಗೆ ಮಂಪರು ಆವರಿಸಿ ನಿದ್ದೆಗೆ ಜಾರುತ್ತೀರಿ.

ಈ ಪ್ರಮುಖ ಸೂತ್ರಗಳಿಂದ ನೀವು ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ದೆ ಬರುವಂತೆ ಮಾಡುತ್ತೆ. ಇದನ್ನು ಪಾಲಿಸಿ ಚೆನ್ನಾಗಿ ನಿದ್ದೆ ಮಾಡಿ ಆರೋಗ್ಯವಂತರಾಗಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!