ಹೊಸದಿಗಂತ ವರದಿ, ಚಿಕ್ಕೋಡಿ:
ರಾಜ್ಯದಲ್ಲಿ ಹಿಜಾಬ್ ಹಾಗು ಕೇಸರಿ ಶಾಲು ವಿವಾದ ಒಂದುಕಡೆಯಾದರೆ ಇತ್ತ ಚಿಕ್ಕೋಡಿಯಲ್ಲಿ ಅದೇ ಹಿಂದು ಹೃದಯ ಸಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಹಿಂದು- ಮುಸ್ಲಿಂ ಬಾಂಧವರು ಸೇರಿ ಅತಿ ವಿಜ್ರಂಬಣೆ ಹಾಗು ವಿಶೇಷತೆಯಿಂದ ಆಚರಿಸಿದರು.
ಸದಾ ಶಾಂತಿಗೆ ಹೆಸರಾದ ಚಿಕ್ಕೋಡಿ ಪಟ್ಟಣದ ಪ್ರಭುವಾಡಿಯಲ್ಲಿ ಶನಿವಾರ ಶಿವಾಜಿ ಮಹಾರಾಜರ 392ನೇ ಜಯಂತಿಗೆ ಮಜ್ಜಿದ ಬೇಪಾರಿ, ಇರಫಾನ ಬೇಪಾರಿ ಮುಸಲ್ಮಾನ ಹಾಗು ಮರಾಠಾ ಸಮಾಜದ ಮುಖಂಡರು ಸೇರಿ ಒಂದೇ ವೇದಿಕೆಯ ಮುಲಕ ಸಮಾಜಕ್ಕೆ ಸಮಾನತೆಯ ಪಾಠ ಸಾರಿದರು. ಅಲ್ಲದೆ ಮುಸ್ಲಿಂ ಮುಖಂಡರಿಂದ ಪ್ರಸಾದ ಕಾರ್ಯ ಆಯೋಜಿಸಿದ್ದು ವಿಶೇಷವಾಗಿ ಕಂಡು ಬಂತು.