ಮ್ಯಾನ್ಮಾರ್‌ ನಲ್ಲಿ ಕೃಷಿ ಕಾರ್ಮಿಕರಾಗಿದ್ದ ಚತುರ್ಭುಜ ದಶ್ ಕ್ರಾಂತಿಕಾರಿಗಳೊಂದಿಗೆ ಸೇರಿ ಬ್ರಿಟೀಷರೊಡನೆ ಹೋರಾಟಕ್ಕಿಳಿದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚತುರ್ಭುಜ ದಶ್ ಅವರು 29 ಸೆಪ್ಟೆಂಬರ್ 1920 ರಂದು ಒರಿಸ್ಸಾದ ಪುರಿ ಜಿಲ್ಲೆಯ ರಾಜರನ್‌ಪುರದ ಪಿಂಪಲ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಪತಿ ದಾಶ್. ಎರಡನೆಯ ಮಹಾಯುದ್ಧದ ಮೊದಲು, ಅವರು ಜೀವನೋಪಾಯವನ್ನು ಹುಡುಕಿಕೊಂಡು ಮ್ಯಾನ್ಮಾರ್‌ಗೆ ಹೋಗಿದ್ದರು. ರಂಗೂನ್‌ನ ಚಮ್ಗೋಯ್‌ನಲ್ಲಿ ಕೃಷಿ ಕಾರ್ಮಿಕರಾಗಿ ಅವರು ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಭಾರತದಲ್ಲಿ 1943 ರಲ್ಲಿ ಸ್ವಾತಂತ್ರ್ಯ ಚಳುವಳಿ ಬಿರುಸಾಯಿತು. ಮ್ಯಾನ್ಮಾರ್‌ ಮೊದಲಾದ ಭಾಗಗಳಲ್ಲಿ ಕ್ರಾಂತಿಕಾರಿಗಳ ಪ್ರಭಾವ ಜೋರಾಯಿತು. ಚಳುವಳಿಯಿಂದ ಪ್ರೇರೇಪಿತರಾಗಿ ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದ ಚತುರ್ಭುಜ ದಶ್ ಹೋರಾಟಕ್ಕೆ ಧುಮುಕಿದರು. ಅವರು ಶಸ್ತ್ರಾಸ್ತ್ರ ಹೋರಾಟದ ಬಗ್ಗೆ ಗೋಸಾಲ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ತರಬೇತಿಯ ನಂತರ, ಅವರು ಸೈನ್ಯಕ್ಕೆ ಸೇರಿದರು ಮತ್ತು ಸೈನ್ಯದೊಂದಿಗೆ ಇಂಫಾಲ್ಗೆ ಮುನ್ನಡೆದರು. ಆದರೆ ಭಾರತೀಯ ರಾಷ್ಟ್ರೀಯ ಸೇನೆಯ ಸೋಲಿನ ಬಳಿಕ ಅವರು ಇತರ ಸೈನಿಕರೊಂದಿಗೆ 1945 ರಲ್ಲಿ ಬ್ರಿಟಿಷ್ ಪಡೆಗೆ ಶರಣಾದರು ಮತ್ತು ಹನ್ನೊಂದು ತಿಂಗಳ ಕಾಲ ಯುದ್ಧದ ಖೈದಿಯಾಗಿ ರಂಗೂನ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು 1946 ರಲ್ಲಿ ಬಿಡುಗಡೆಯಾಗಿ ತಮ್ಮ ಗ್ರಾಮಕ್ಕೆ ಮರಳಿದರು. ಅವರ ಮರಣದ ಕುರಿತಾದ ಮಾಹಿತಿಗಳು ಲಭ್ಯವಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!