ಪಾಕ್‌ ವಿಶ್ವಕಪ್‌ ಟೀಂ ಆಯ್ಕೆ ಬಗ್ಗೆ ಅಪಸ್ವರ: ‌ʼಚೀಫ್‌ ಸೆಲೆಕ್ಟರ್‌ನಿಂದ ಚೀಪ್‌ʼ ಆಯ್ಕೆ ಎಂದ ಅಮೀರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದಲ್ಲಿ ಅ.16ರಿಂದ ಆರಂಭವಾಗಲಿರುವ T20 ವಿಶ್ವಕಪ್ ಗೆ ಪಾಕಿಸ್ತಾನ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದೆ. ಈ ಬೆನ್ನಲ್ಲೇ ತಂಡದ ಆಯ್ಕೆ ಕುರಿತಾಗಿ ಭಾರೀ ಟೀಕೆಗಳು ಕೇಳಿಬಂದಿವೆ. ಅದರಲ್ಲಿಯೂ ಪಾಕ್ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಪಾಕಿಸ್ತಾನದ ಮುಖ್ಯ ಆಯ್ಕೆಗಾರ ಮುಹಮ್ಮದ್ ವಾಸಿಮ್ ವಿರುದ್ಧ‌ ಕಟು ವಾಗ್ದಾಳಿ ನಡೆಸಿದ್ದಾರೆ.
ಆಯ್ಕೆ ಸಮಿತಿಯು ಹೆಸರಿಸುವ 15 ಜನರ ತಂಡವನ್ನು ಬಾಬರ್ ಅಜಮ್ ನೇತೃತ್ವ ಮುನ್ನಡೆಸಲಿದ್ದಾರೆ. ಅಚ್ಚರಿಯೆಂದರೆ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಫಖರ್ ಜಮಾನ್ ರನ್ನು ಮೀಸಲು ಆಟಗಾರರ ಗುಂಪಿನಲ್ಲಿ ಇರಿಸಲಾಗಿದೆ. ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ಮತ್ತೊಮ್ಮೆ ನಿರ್ಲಕ್ಷಿಸಲಾಗಿದೆ.
ಏಷ್ಯಾ ಕಪ್ 2022 ರ ಫೈನಲ್ ಸೋಲಿನ ನಂತರ ಪಾಕ್‌ ಮಧ್ಯಮ ಕ್ರಮಾಂಕದ ಬಗ್ಗೆ ಭಾರೀ ಚರ್ಚೆಗಳಾಗುತ್ತಿದ್ದವು. ಖುಶಿಲ್ ಶಾ ಮತ್ತು ಆಸಿಫ್ ಅಲಿ ಏಷ್ಯಾಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿ ಸ್ಕ್ಯಾನರ್‌ ನಲ್ಲಿದ್ದರು. ಆದಾಗ್ಯೂ, T20 ವಿಶ್ವಕಪ್‌ಗೆ ಪಾಕ್‌ ತನ್ನ ಹಳೆಯ ಬ್ಯಾಟ್ಸ್‌ ಮನ್‌ ಗಳನ್ನೇ ನೆಚ್ಚಿಕೊಂಡಿದೆ. ಬ್ಯಾಟಿಂಗ್ ಕ್ರಮಾಂಕವನ್ನು ಹೆಚ್ಚಿಸಲು ಪಾಕಿಸ್ತಾನ ಇನ್ನೂ ಟಿ 20 ಮಾದರಿಯಲ್ಲಿ ಆಡದ ʼಟೆಸ್ಟ್‌ ಸ್ಪೆಷಲಿಸ್ಟ್‌ʼ ಶಾನ್ ಮಸೂದ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಕೊನೆಯದಾಗಿ ಡಿಸೆಂಬರ್ 2021 ರಲ್ಲಿ ಟಿ 20 ಸ್ವರೂಪದಲ್ಲಿ ಕಾಣಿಸಿಕೊಂಡ ಆದರೆ ಹೈದರ್ ಅಲಿಯನ್ನು ಅಚ್ಚರಿಯ ರೀತಿಯಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ತಂಡದ ಆಯ್ಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೀರ್ “ಚೀಫ್ ಸೆಲೆಕ್ಟರ್‌ ನಿಂದ ಚೀಪ್ ಆಯ್ಕೆ” ಎಂದು ಟ್ವಿಟರ್‌ನಲ್ಲಿ ಗೇಲಿ ಮಾಡಿದ್ದಾರೆ. ತಂಡದ ಆಯ್ಕೆಯನ್ನು “ಕರುಣಾಜನಕ” ಎಂದು ಟೀಕಿಸಿರುವ ಪಾಕಿಸ್ತಾನದ ಪತ್ರಕರ್ತರ ಪೋಸ್ಟ್ ಅನ್ನು ಅಮೀರ್ ಹಂಚಿಕೊಂಡಿದ್ದಾರೆ.

T20 ವಿಶ್ವ ಕಪ್‌ಗಾಗಿ ಪಾಕಿಸ್ತಾನ ತಂಡ:
ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮಸೂದ್ ಮತ್ತು ಉಸ್ಮಾನ್ ಖಾದಿರ್.
ಮೀಸಲು ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!