Wednesday, June 7, 2023

Latest Posts

ಮೋಸ, ಮೋಸ ಆಗ್ತಿದೆ ಅಂತ ವೋಟ್ ಹಾಕಿ ‘ಧರಣಿ’ ಕುಳಿತ ಅಜ್ಜಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಅವಕಾಶ ಮಾಡಿಕೊಡಲಾಗಿತ್ತು.

ಆದರೆ ಗದಗದಲ್ಲಿ 95 ವರ್ಷದ ಅಜ್ಜಿಯೊಬ್ಬರು ಮತ ಹಾಕಲು ಮತಗಟ್ಟೆಗೇ ಬಂದಿದ್ದಾರೆ. ಆದರೆ ಮತದಾನದ ನಂತರ ಅಜ್ಜಿ ಧರಣಿ ಕೂತಿದ್ದು, ಹಿರಿಯ ಅಧಿಕಾರಿಗಳು ಬರೋ ತನಕ ಎದ್ದಾಳೋದಿಲ್ಲ ಅಂತಿದ್ದಾರೆ.

ಮೊಮ್ಮಗನ ಜೊತೆ ವೋಟ್ ಮಾಡಲು ಮುಂಡರಗಿ ಪಟ್ಟಣದ ಮತಗಟ್ಟೆ 53 ರಲ್ಲಿ ಮುಕ್ತಂಬೀ ದೊಡ್ಡಮನಿ ಅವರು ಬಂದಿದ್ದರು. ಮತಗಟ್ಟೆ ಅಧಿಕಾರಿಗಳು ಅಜ್ಜಿ ವೋಟ್ ಮಾಡುವಾಗ ಮೊಮ್ಮಗನನ್ನು ಒಳಗೆ ಬಿಟ್ಟಿಲ್ಲ.

ಅಜ್ಜಿ ತೋರಿಸಿದ ಚಿಹ್ನೆಗೆ ಅಧಿಕಾರಿಗಳು ವೋಟ್ ಮಾಡಿಲ್ಲ, ಬದಲಿಗೆ ತಮಗೆ ಬೇಕಾದ ಚಿಹ್ನೆಗೆ ವೋಟ್ ಮಾಡಿಸಿದ್ದಾರೆ ಎಂದು ಅಜ್ಜಿ ಆರೋಪಿಸಿದ್ದಾರೆ. ಮತಗಟ್ಟೆ ಮುಂದೆ ಧರಣಿ ಕುಳಿತಿದ್ದು, ಹಿರಿಯ ಅಧಿಕಾರಿಗಳು ಬಂದು, ನ್ಯಾಯ ದೊರಕುವವರೆಗೂ ಎದ್ದೇಳೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!