ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಡೆಲ್ಲಾ ಗೆ ಪುತ್ರವಿಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಕ್‌ ನ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್‌ ನ ಸಿಇಒ ಸತ್ಯ ನಡೆಲ್ಲಾ ಅವರ ಪುತ್ರ ಝೈನ್‌ ನಡೆಲ್ಲಾ (26) ನಿಧನರಾಗಿದ್ದಾರೆ.
ಹುಟ್ಟಿನಿಂದಲೇ ಸೆರಿಬ್ರಲ್‌ ಪಾಲ್ಸಿ ಆರೋಗ್ಯ ಸಮಸ್ಯೆಯೊಂದಿಗೆ ಬಳಲುತ್ತಿದ್ದ ಝೈನ್‌ ನಡೆಲ್ಲಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸತ್ಯ ನಡೆಲ್ಲಾ ಅವರು ಇ-ಮೇಲ್‌ ಮೂಲಕ ವಿಚಾರ ತಿಳಿಸಿದ್ದಾರೆ.

Tara Shares a Message of Inclusion - On the Pulseಸತ್ಯಾ ನಡೆಲ್ಲಾ 2014ರಲ್ಲಿ ಮೈಕ್ರೋಸಾಫ್ಟ್‌ ನ ಸಿಇಒ ಆದ ಬಳಿಕ ವಿಶೇಷ ಚೇತನರಿಗಾಗಿ ವಿಶೇಷ ವಿನ್ಯಾಸಗಳನ್ನು ಗ್ರಾಹಕರಿಗೆ ಕೊಟ್ಟಿದ್ದರು.
ಈ ಬಗ್ಗೆ ಮಾತನಾಡಿದ ಮಕ್ಕಳ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರಿಂಗ್‌, ಝೈನ್ ಅವರ ಸಂಗೀತದಲ್ಲಿನ ಅಭಿರುಚಿ, ಅವರ ಸುಂದರ ಮುಗುಳ್ನಗೆ ಮತ್ತು ಅವರನ್ನು ಪ್ರೀತಿಸಿದ ಎಲ್ಲರಿಗೂ ಅವರು ಸಂತಸ ತಂದಿದ್ದಾರೆ. ಇವರು ಎಂದಿಗೂ ನೆನಪಿನಲ್ಲಿರಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!