ನಟಿ ಸಮಂತಾ ತೊಟ್ಟ ಈ ಸೀರೆ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಸಮಂತಾ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ನಿನ್ನೆಗೆ 12 ವರ್ಷಗಳಾಗಿದ್ದು, ಇದೇ ಖುಷಿಗೆ ವಿಶೇಷ ಸೀರೆ ತೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸಮಂತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸೀರೆ ಉಟ್ಟ ಫೋಟೋ ಹಾಕಿ ಗಮನ ಸೆಳೆಯುತ್ತಿದ್ದಾರೆ. ಈ ಫೋಟೋದಲ್ಲಿ ಅವರ ಸೀರೆ ಹಾಗೂ ಕಿವಿಯ ಓಲೆ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಬೆಲೆಯನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದಾರೆ. ಇದರ ಬೆಲೆ ಕೇಳಿ ನಿಜಕ್ಕೂ ಅಚ್ಚರಿ ಹೊರಹಾಕಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಹೊಸ ಸೇರೆಯ ಫೋಟೋಗಳನ್ನು ನಟಿ ಸಮಂತಾ ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಸಮಂತಾರಾ ಸೀರೆ ಹಾಗೂ ಕಿವಿಯೋಲೆ ತುಂಬಾ ಆಕರ್ಷಕವಾಗಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

ಸಮಂತಾ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಿಂದಿ ವೆಬ್​ ಸೀರಿಸ್​ ಕೂಡ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಅಭಿಮಾನಿಗಳು ಅದರ ಬೆಲೆಯನ್ನು ಹುಡುಕಿ ಪತ್ತೆ ಮಾಡಿದ್ದಾರೆ. ಇದರ ಬೆಲೆ ಕೇಳಿ ಅಭಿಮಾನಿಗಖುಗಳು ಶಾಕ್ ಆಗಿದ್ದಾರೆ.
ಈ ಕ್ರೀಂ ಕಲರ್ ಬಣ್ಣದ ಸೀರೆಗೆ ಸಮಂತಾ ಬರೋಬ್ಬರಿ 1,14,999 ರೂ. ಕೊಟ್ಟಿದ್ದಾರಂತೆ.

ಸಮಂತಾ ಅವರು ಫೆಬ್ರವರಿ 26ರಂದು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷ ಪೂರ್ಣಗೊಂಡಿದೆ. ಈ ವಿಶೇಷ ದಿನದಂದು ಅವರು ಕೆಲವು ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ಈ ಸೀರೆಯ ಫೋಟೊ ಶೇರ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!