ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಹೋಗಲಾಡಿಸೋಕೆ ತ್ವಚೆಯನ್ನು ಈ ರೀತಿ ಆರೈಕೆ ಮಾಡಿ..

ಇತ್ತೀಚನ ಬಿಸಿ ಲೈಫ್ ಸ್ಟೈಲ್ ನಲ್ಲಿ ಕಂಪ್ಯೂಟರ್, ಮೊಬೈಲ್ ಹೆಚ್ಚಾಗಿ ನೋಡ್ತೀವಿ ಇದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಕಾಣಿಸುತ್ತೆ. ಇದು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ.. ನಿಮಗೂ ಡಾರ್ಕ್ ಸರ್ಕಲ್ ಇದ್ರೆ ಈ ರೀತಿ ಮನೆಯಲ್ಲೇ ಆರೈಕೆ ಮಾಡಿ..

ಅಲೊವೆರಾ: ನಿಮ್ಮ ಕಣ್ಣಿನ ಸುತ್ತಲಿನ ಭಾಗಕ್ಕೆ ಅಲೂವೆರಾ ಜೆಲ್ ಹಚ್ಚಿ 15-20 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿದ ಮುಖ ತೊಳೆಯಿರಿ.

ಸೌತೆಕಾಯಿ, ಟೊಮಾಟೋ, ಆಲೂಗಡ್ಡೆ: ಇದರಲ್ಲಿ ಯಾವುದಾದರೂ ಒಂದು ತರಕಾರಿಯನ್ನು 20 ರಿಂದ 30 ನಿಮಿಷ ನಿಮ್ಮ ಕಣ್ಣಿನ ಮೇಲೆ ಇಡಬಹುದು.

ರೋಸ್ ವಾಟರ್: ಕಾಟನ್ ಪ್ಟಾಡ್ ನಲ್ಲಿ ರೋಸ್ ವಾಟರ್ ನೆನಸಿಟ್ಟು ದಿನಕ್ಕೆ ಎರಡು ಬಾರಿ ಕಣ್ಣಿನ ಮೇಲೆ ಇಡಿ.

ತಂಪು ಟೀ ಬ್ಯಾಗ್: ಆಂಟಿ ಆಕ್ಸಿಡೆಂಡ್ ಇರುವ ಟೀ ಬ್ಯಾಗ್ ಅನ್ನು ಫ್ರಿಡ್ಜ್ ನಲ್ಲಿಟ್ಟು ಬಳಿಕ ನಿಮ್ಮ ಕಣ್ಣಿನ ಮೇಲಿಡಿ.

ಅರಿಶಿನ: ಅರಿಶಿನ ಹಾಗೂ ಹಾಲು ಮಿಶ್ರಣ ಮಾಡಿ ಕಣ್ಣಿನ ಸುತ್ತ ಹಚ್ಚುವುದರಿಂದ ಮುಖದಲ್ಲಿರುವ ಸುಕ್ಕು ಹಾಗೂ ಕಪ್ಪು ಬಣ್ಣ ಕಡಿಮೆಯಾಗುತ್ತದೆ.

ಡಾರ್ಕ್ ಚಾಕೊಲೇಟ್: ಪ್ರತಿ ದಿನ ಒಂದಿಷ್ಟು ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ತ್ವಚೆಗೆ ಸುಂದರ ಕಾಂತಿ ನೀಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!