ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ಸ್ಟಾರ್ ಜೋಡಿ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಈಗ ಮುಂಬೈ ನಲ್ಲಿನ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.
ಅಷ್ಟೆ ಅಲ್ಲಾ ವಿಚಾರ.. ಈಗ ಕತ್ರೀನಾ ಹಾಗೂ ವಿಕ್ಕಿ ವಾಸ್ತವ್ಯ ಹೂಡಿರೋದು ಬಾಡಿಗೆ ಮನೆಯಲ್ಲಿ.. ಅದೊಂದು ಐಶಾರಾಮಿ ಕಟ್ಟಡವಾಗಿದ್ದು, ಬರೋಬ್ಬರಿ 5ಸಾವಿರ ಸ್ಕ್ವೇರ್ ಫೀಟ್ ಇದೆಯಂತೆ. ಇನ್ನು ಈ ಮನೆಗೆ ಭದ್ರತಾ ಠೇವಣಿಯಾಗಿಯೇ ಈ ಸ್ಟಾರ್ ಜೋಡಿ 1.75 ಕೋಟಿ ರೂ. ನೀಡಿದ್ದು, ತಿಂಗಳಿಗೆ ಬರೋಬ್ಬರಿ 8 ಲಕ್ಷ ರೂ. ಬಾಡಿಗೆ ಪಾವತಿಸಲಿದ್ದಾರೆ.
ಮುಂಬೈನ ಜುಹೂನಲ್ಲಿರುವ ತಮ್ಮ ಹೊಸ ಮನೆಯ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕತ್ರೀನಾ, ಅದಕ್ಕೆ ಹೋಂ ಸ್ವೀಟ್ ಹೋಂ ಎಂದಿದ್ದಾರೆ.