‘ಗೆಹ್ರಾಯಿಯಾ’ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಿಕಾ ಪಡುಕೋಣ್, ಅನನ್ಯಾ ಪಾಂಡೆ ಹಾಗೂ ಸಿದ್ಧಾರ್ಥ್ ಚತುರ್ವೇದಿ ಅಭಿನಯದ ಗೆಹ್ರಾಯಿಯಾ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದೆ.
ಜನವರಿ 25 ರಂದು ಈ ಚಿತ್ರ ತೆರೆಕಾಣಬೇಕಿತ್ತು. ಕಾರಣಾಂತರಗಳಿಂದ ಸಿನಿಮಾವನ್ನು ಫೆ.11ಕ್ಕೆ ರಿಲೀಸ್ ಮಾಡೋದಕ್ಕೆ ತಂಡ ನಿರ್ಧರಿಸಿದೆ.
ಇಂದು ದೀಪಿಕಾ ಜನ್ಮದಿನ ಆಗಿರೋದ್ರಿಂದ ನಿಮಗೆಲ್ಲರಿಗೂ ನನ್ನ ಕಡೆಯಿಂದಲೂ ಪುಟ್ಟ ಗಿಫ್ಟ್ ಎಂದು ದೀಪಿಕಾ ಸಿನಿಮಾದ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.


ಪೋಸ್ಟರ‍್ಸ್ ಹಾಗೂ ಸಿನಿಮಾದ ಗ್ಲಿಂಪ್ಸ್‌ಗಳು ಈಗಾಗಲೇ ವೈರಲ್ ಆಗಿದ್ದು, ಬಹಳ ವಿಭಿನ್ನವಾಗಿ ಕಾಣುತ್ತಿದೆ. ದೀಪಿಕಾ ಕೂಡ ಈ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ ಹಾಗೂ ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!