ಇದು ನೋಡೋಕೆ ಲಾಲಿ ಪಾಪ್‌ ಇದ್ದಂತಿದೆ: ಆದರೆ ಇದು ಬರೋಬ್ಬರಿ 44 ಕೆ.ಜಿ ತೂಕದ ವಿಶ್ವದ ಅತಿದೊಡ್ಡ ಕೇಕ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚೆನ್ನಾಗಿ ಇರೋದು ಅಥವಾ ತುಂಬಾ ಕೆಟ್ಟದಾಗಿ ಇರೋದು ಬೇಗ ವೈರಲ್‌ ಆಗುತ್ತೆ. ಅದರಲ್ಲೂ ತಿಂಡಿ, ತಿನಿಸು, ಆಹಾರಗಳಿಗಂತೂ ಕೊರತೆಯೇ ಇಲ್ಲ.
ಎಲ್ಲಾ ರೀತಿಯ ಪ್ರಯೋಗಗಳನ್ನು ಸ್ವೀಕರಿಸುತ್ತೆ ಸೋಷಿಯಲ್‌ ಮೀಡಿಯಾ, ಇದೀಗ ವಿಶ್ವ ದಾಖಲೆ ಬರೆದ ಯುವಕನ ಲಾಲಿ ಪಾಪ್‌ ನ ಕೇಕ್‌ ಈಗ ಎಲ್ಲೆಡೆ ಹರಿದಾಡುತ್ತಿದೆ.


ಅಮೆರಿಕದ ನಿಕ್‌ ಡಿಜಿಯೋವಾನಿ ಹಾಗೂ ಜಾಪಾನಿನ ಲಿನ್‌ ಡೇವಿಸ್ ಈ ಕೇಕ್‌ ಪಾಪ್‌ ತಯಾರಿಸಿದ್ದಾರೆ.  ಕೇಕ್‌ ತಯಾರಿಸುವ ಬಗ್ಗೆ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ ನಿಕ್‌. ಹಾಗೆಯೇ ವಿಶ್ವದ ಅತಿ ದೊಡ್ಡ ಕೇಕ್‌ ತಯಾರಿಸಿರುವ ಕೀರ್ತಿಗೂ ನಿಕ್‌ ಪಾತ್ರರಾಗಿದ್ದಾರೆ.
ಈ ಕೇಕ್‌ ಪಾಪ್‌ ಬರೋಬರಿ 44.24 ಕೆ.ಜಿ. ತೂಕವಿದ್ದು, ಅದರ ಮೇಲೆ ಸ್ಪ್ರಿಂಕ್ಲರ್ಸ್‌ ಗಳನ್ನು ಹಾಕಿ ತೇಟ್‌ ಲಾಲಿ ಪಪ್‌ ನಂತೆ ಕಾಣುವ ಹಾಗೆ ತಯಾರಿ ಮಾಡಿದ್ದಾರೆ. ಈ ವಿಡಿಯೋಗೆ 3.5 ಲಕ್ಷ ಮಂದಿ ಲೈಕ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!