ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರ ರಂಗದಲ್ಲಿ ಎದ್ದಿರುವ ಲೈಂಗಿಕ ಕಿರುಕುಳ ಸದ್ದು , ಇದೀಗ ಕರ್ನಾಟಕದಲ್ಲೂ ಎದಿದ್ದು, ಕನ್ನಡ ಚಿತ್ರರಂಗದ ಫೈರ್ (FIRE) ಸಂಸ್ಥೆ ನೀಡಿರುವ ಮನವಿಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಫೈರ್ ಸಂಸ್ಥೆಯ ಸದಸ್ಯರು ಇಂದು ಕೇರಳ ಮಾದರಿಯಲ್ಲಿ ಸಮಿತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇರಳ ಮಾದರಿಯಲ್ಲಿ ಸಮಿತಿ ರಚನೆ ಮಾಡುವಂತೆ ಇಂದು (ಗುರುವಾರ) ನಟ ಚೇತನ್, ಶೃತಿ ಹರಿಹರನ್ ನೇತೃತ್ವದ ಫೈರ್ ಸಂಸ್ಥೆ ಸಿದ್ದರಾಮಯ್ಯರನ್ನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು.