ಕಬಕ ಕುಳದಲ್ಲಿ ಚಿರತೆ ಓಡಾಟ?? ಆತಂಕದಲ್ಲಿ ಜನತೆ, ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ

ದಿಗಂತ ವರದಿ ಪುತ್ತೂರು:

ನಗರದ ಹೊರ ವಲಯದ ಕಬಕದ ಕುಳ ಎಂಬಲ್ಲಿ ಬುಧವಾರ ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದೆ ಎನ್ನಲಾಗಿದ್ದು , ಈ ಕುರಿತು ಅರಣ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.

ಕಬಕ-ವಿಟ್ಲ ರಸ್ತೆಯ ಅಂಗನವಾಡಿ ಪಕ್ಕದಲ್ಲೇ ನಿನ್ನ ರಾತ್ರಿ ನಾಯಿಗಳು ಬೊಗಳುವ ಸದ್ದಿಗೆ ಸ್ಥಳೀಯ ನಿವಾಸಿ ಮೂಸಾ ಎಂಬವರು ಎದ್ದು ನೋಡಿದಾಗ ಚಿರತೆ ಓಡಾಡುವುದನ್ನು ಕಂಡು ಭಯಭೀತರಾಗಿದ್ದಾರೆ.
ಆತಂಕಗೊಂಡ ಮೂಸಾ ಅವರು ಬಳಿಕ ಅವರ ಪತ್ನಿಗೆ ವಿಚಾರ ತಿಳಿಸಿದ್ದಾರೆ. ಈ ವೇಳೆ ಇಬ್ಬರೂ ಕಿಟಕಿಯಿಂದ ನೋಡುವಾಗ ಚಿರತೆ ಓಡುವುದನ್ನು ಕಣ್ಣಾರೆ ನೋಡಿದ್ದಾರೆ ಎನ್ನಲಾಗಿದೆ. ಇದಾದ ನಂತರ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಅಕ್ಕ ಪಕ್ಕದ ಮನೆಯವರಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕುಳ ಪ್ರದೇಶಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಅಲ್ಲಿನ ಕೆಲ ಮನೆಯವರ ಜಾಗದಲ್ಲಿ ಚಿರತೆಯ ಕಾಲಿನ ಹೆಜ್ಜೆಯಂತಹ ಗುರುತು ಕಾಣಿಸಿಕೊಂಡಿದೆ. ಸದ್ಯ ಕುಳ ಸುತ್ತಮುತ್ತಲಿನ ಯಾರೂ ಕೂಡಾ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಈ ಕುರಿತು ಸತ್ಯಾಸತ್ಯತೆಯನ್ನು ಅರಣ್ಯ ಇಲಾಖೆ, ಪರಿಶೀಲಿಸುತ್ತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿದ್ದು ಪರಿಶೀಲನೆ ನಡೆಸಲಾಗುತ್ತಿದೆ. ಇಂದು ರಾತ್ರಿ ಆ ಪ್ರದೇಶದಲ್ಲಿ ಕಾವಲು ಹಾಕಿ ಚಿರತೆ ಇರುವಿಕೆ ಬಗ್ಗೆ ಸ್ಪಷ್ಟಪಡಿಸಿಕೊಳ್ಳ ಲಾಗುವುದು ಎಂದು ಪುತ್ತೂರು ವಿಭಾಗ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!