ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಕ್ಕಿ ಕೌಶಲ್ ಸದ್ಯ ಇಂಟರ್‌ನೆಟ್‌ನ ಸೆನ್ಸೇಷನ್ ಆಗಿದ್ದಾರೆ. ಯಾವ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ರೂ ವಿಕ್ಕಿಯ ತೌಬಾ ತೌಬಾ ಕಾಣಿಸುತ್ತಿದೆ.
ಅದರಲ್ಲಿಯೂ ವಿಕ್ಕಿ ಡ್ಯಾನ್ಸ್‌ಗೆ ಜನ ಫಿದಾ ಆಗಿದ್ದಾರೆ. ಇನ್ನು ವಿಕ್ಕಿ ಡ್ಯಾನ್ಸ್ ವಿಡಿಯೋ ಮೇಲೆ ಹೃತಿಕ್ ರೋಷನ್ ಕಮೆಂಟ್ ಮಾಡಿದ್ದು, ವಿಕ್ಕಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಹೃತಿಕ್ ರೋಷನ್ ನಿಮ್ಮ ಡ್ಯಾನ್ಸ್ ಸಖತ್ ಆಗಿದ್ದೆ, ತುಂಬಾ ಎಂಜಾಯ್ ಮಾಡಿದೆ ಎಂದು ಕಮೆಂಟ್ ಮಾಡಿದ್ದು, ವಿಕ್ಕಿ ಸರ್‌ಪ್ರೈಸ್ ಹಾಗೂ ಶಾಕ್ ಆಗಿದ್ದಾರೆ. ಅಂತೆಯೇ ಹೃತಿಕ್ ಸರ್ ಕಮೆಂಟ್ ನನಗೆ ಆಸ್ಕರ್ ಸಮಾನ ಎಂದೂ ಹೇಳಿದ್ದಾರೆ.