ಮಂಕಿ ಪಾಕ್ಸ್‌ ವೈರಸ್‌ ಪತ್ತೆ ಹಚ್ಚಲು ಆರ್‌ಟಿಪಿಸಿಆರ್‌ ಕಿಟ್‌ ಕಂಡುಹಿಡಿದ ಚೆನ್ನೈ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವದಾದ್ಯಂತ ಹರಡುತ್ತಿರುವ ಮಂಕಿ ಪಾಕ್ಸ್‌ ವೈರಸ್‌ ಪತ್ತೆ ಹಚ್ಚಲು ಚೆನ್ನೈ ಮೂಲದ ವೈದ್ಯಕೀಯ ಕಂಪನಿಯೊಂದು ಆರ್‌ಟಿಪಿಸಿಆರ್‌ ಕಿಟ್‌ ಕಂಡುಹಿಡಿದಿದೆ.

ಚೆನ್ನೈ ಮೂಲದ ವೈದ್ಯಕೀಯ ಸಾಧನಗಳ ಕಂಪನಿ ಟ್ರಿವಿಟ್ರಾನ್ ಹೆಲ್ತ್‌ಕೇರ್ ವೈರಲ್ ಸೋಂಕನ್ನು ಪತ್ತೆಹಚ್ಚಲು ನೈಜ-ಸಮಯದ ಆರ್‌ಟಿ-ಪಿಸಿಆರ್ ಆಧಾರಿತ ಕಿಟ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದೆ.

ಮಂಕಿಪಾಕ್ಸ್ ರಿಯಲ್-ಟೈಮ್ ಪಿಸಿಆರ್ ಕಿಟ್ ನಾಲ್ಕು ಬಣ್ಣದ ಪ್ರತಿದೀಪಕ(ಫ್ಲೋರೊಸೆನ್ಸ್ ) ಆಧಾರಿತ ಕಿಟ್‌ ಆಗಿದ್ದು ಇದು ಸಿಡುಬು ಮತ್ತು ಮಂಕಿಪಾಕ್ಸ್‌ ವೈರಸ್‌ ಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಸಿಂಗಲ್‌ ಟ್ಯೂಬ್‌ ಸಿಂಗಲ್‌ ಫಾರ್ಮ್ಯಾಟ್‌ನಲ್ಲಿ ಇದು ಕಾರ್ಯನಿರ್ವಹಿಸಲಿದ್ದು ವೈರಸ್‌ ಪತ್ತೆ ಹಚ್ಚಲು ಕೇವಲ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿರುವುದಾಗಿ ವರದಿಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!