ಚೆಸ್ ಆಡುತ್ತಿದ್ದ ಬಾಲಕನ ಬೆರಳು ಕತ್ತರಿಸಿದ ರೋಬೋಟ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೆಸ್ ಆಡುವಾಗ ರೋಬೋಟ್ ಬಾಲಕನ ಬೆರಳನ್ನು ಕತ್ತರಿಸಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ರಷ್ಯಾದಲ್ಲಿ ನಡೆಯುತ್ತಿರುವ ಮಾಸ್ಕೋ ಚೆಸ್ ಓಪನ್ ಟೂರ್ನಿಯಲ್ಲಿ ಕ್ರಿಸ್ಟೋಫರ್ ಎಂಬ ಏಳು ವರ್ಷದ ಬಾಲಕ ರೋಬೋಟ್ ಜೊತೆ ಚೆಸ್ ಆಡುತ್ತಿದ್ದಾನೆ. ಈ ವೇಳೆ ರೋಬೋಟ್‌ ಚಲಿಸುವ ಮೊದಲು ಬಾಲಕ ಚೆಸ್ ಬೋರ್ಡ್ ಮೇಲೆ ಕೈ ಹಾಕಿದ್ದಾನೆ ಎಂದು ರಷ್ಯಾದ ಚೆಸ್ ಫೆಡರೇಶನ್ ಉಪಾಧ್ಯಕ್ಷ ಸೆರ್ಗೆಯ್ ಸ್ಮಾಗಿನ್ ಹೇಳಿದ್ದಾರೆ. ರೋಬೋಟ್ ಹುಡುಗನ ಬೆರಳನ್ನು ಒತ್ತುವುದನ್ನು ನೋಡಿದ ಮೂವರು ತಕ್ಷಣವೇ ಅಲ್ಲಿಗೆ ಓಡಿ ಬಂದು ಬೆರಳು ಬಿಡಿಸಿದರು.

ಈ ಪ್ರಕ್ರಿಯೆಯಲ್ಲಿ ಕ್ರಿಸ್ಟೋಫರ್ ಬೆರಳಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಮುರಿದ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!