Monday, September 25, 2023

Latest Posts

ಚೆಸ್ ವಿಶ್ವಕಪ್​ನ ಫೈನಲ್: ಮೊದಲ ಗೇಮ್​ ಡ್ರಾನಲ್ಲಿ ಅಂತ್ಯ, ಪಂದ್ಯ ನಾಳೆ ಮುಂದುವರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆಸ್ ವಿಶ್ವಕಪ್​ನ ಫೈನಲ್ ಪಂದ್ಯದ ಮೊದಲ ಗೇಮ್​ ಡ್ರಾನಲ್ಲಿ ಅಂತ್ಯಗೊಂಡಿದೆ.​

ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಅವರೊಂದಿಗಿನ ಫೈನಲ್​ನ ಪಂದ್ಯದ ಆರಂಭದಲ್ಲಿ ಭಾರತದ ಆರ್​. ಪ್ರಜ್ಞಾನಂದ (R Praggnanandhaa) ಮೇಲುಗೈ ಸಾಧಿಸಿದ್ದರು. ಆದರೆ ಆ ಬಳಿಕ ರಕ್ಷಣಾತ್ಮಕ ನಡೆಗಳೊಂದಿಗೆ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಂಡಿದೆ.​

90 ನಿಮಿಷಗಳ ಮೊದಲ ಸುತ್ತಿನಲ್ಲಿ ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಒತ್ತಡ ನೀಡಿದರು. ಈ ವೇಳೆ ಪ್ರಜ್ಞಾನಂದ ಒಂದು ಹಂತ ದಾಟುತ್ತಿದ್ದಂತೆ ಜಾಣ ನಡೆಗಳನ್ನು ಅರಿತ ಬಳಿಕ ರಕ್ಷಾಣತ್ಮಕ ಆಟಕ್ಕೆ ಒತ್ತು ನೀಡಿದರು.ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.

ಪಂದ್ಯ ನಾಳೆ ಮುಂದುವರಿಕೆ:
ಈ ಪಂದ್ಯದ ಎರಡನೇ ಕ್ಲಾಸಿಕಲ್ ಗೇಮ್​ ನಾಳೆ ನಡೆಯಲಿದೆ. ಇಲ್ಲಿ ಮೊದಲ ಸುತ್ತಿನಲ್ಲಿ ಬಿಳಿ ಕಾಯಿಕೆಗಳೊಂದಿಗೆ ಸ್ಪರ್ಧಿಸಿದ್ದ ಪ್ರಜ್ಞಾನಂದ ನಾಳೆ ಕಪ್ಪು ಕಾಯಿಕೆಗಳೊಂದಿಗೆ ಚದುರಂಗ ಚಲನೆ ಮಾಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!