ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಆರೋಪಿಯ ಬಜರಂಗದಳ ಕಾರ್ಯಕರ್ತರ ಲುಕ್ ನ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಖುದ್ದು ಬಜರಂಗದಳ ಸ್ಪಷ್ಟನೆ ನೀಡಿದ್ದು, ಚೇತನ್ ಬಜರಂಗದಳಕ್ಕೆ ಸೇರಿದವನು ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಎಡಿಟ್ ಮಾಡಲಾದ ಫೋಟೋ ಎಂದು ಬಜರಂಗದಳ ಸ್ಪಷ್ಟನೆ ನೀಡಿದೆ.



