ಚೇತೇಶ್ವರ ಪೂಜಾರ ವಿಸ್ಫೋಟಕ ಆಟಕ್ಕೆ ಬೌಲರ್‌ಗಳು ಕಂಗಾಲು: 131 ಎಸೆತಗಳಲ್ಲಿ 174 ರನ್‌ ಸಿಡಿಸಿ ಅಬ್ಬರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
‌ಕಳೆದ ಒಂದು ವರ್ಷದಿಂದ ಕಳಪೆ ಪಾರ್ಮ್‌ ನಿಂದ ಬಳಲಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸಿದ್ದ ಚೇತೇಶ್ವರ ಪೂಜಾರ ಮರಳಿ ಫಾರ್ಮ್‌ ಗಳಿಸಲು ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ಆಡಲು ಇಳಿದಿದ್ದರು. ಸಸೆಕ್ಸ್ ಪರ ಆಡಲು ಪ್ರಾರಂಭಿಸಿದ ಮೇಲೆ ಪೂಜಾರ ಆಟದ ವಿಧಾನವೇ ಬದಲಾಗಿದೆ, ಅವರ ಅಬ್ಬರದಾಟ ಕಂಡು ಕ್ರಿಕೆಟ್‌ ಜಗತ್ತು ಬೆರಗಾಗುತ್ತಿದೆ. ಕೌಂಟಿ ಟೆಸ್ಟ್‌ ನ ಎಲ್ಲಾ ಪಂದ್ಯಗಳಲ್ಲೂ ಅಬ್ಬರಿಸಿದ್ದ ಪೂಜಾರ ಈಗ ರಾಯಲ್‌ ರಾಯಲ್ ಲಂಡನ್ ಕಪ್‌ನಲ್ಲಿ ಏಕದಿನ ಟೂರ್ನಿಯಲ್ಲೂ ಆರ್ಭಟಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಪೂಜಾರ ಸತತ ಎರಡನೇ ಬಾರಿಗೆ ವಿಸ್ಫೋಟಕ ಶತಕ ಸಿಡಿಸುವ ಮೂಲಕ ತಾನು ಏಕದಿನ, ಟಿ20 ಗೂ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ಪೂಜಾರ ಅವರ 2.0 ಅವತಾರ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.

ಸರ್ರೆ ವಿರುದ್ಧ ನಡೆದ ಪಂದ್ಯದಲ್ಲಿ ಪೂಜಾರ ಕೇವಲ 131 ಎಸೆತಗಳಲ್ಲಿ 174 ರನ್ ಸಿಡಿಸಿದ್ದಾರೆ. ಪೂಜಾರ 132 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ ನಲ್ಲಿ ಬ್ಯಾಟಿಂಗ್‌ ನಡೆಸಿದರು. ಅವರ ಈ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 19 ಬೌಂಡರಿ ಮತ್ತು 5 ಸಿಕ್ಸರ್‌ ಗಳಿದ್ದವು.

 

ಪೂಜಾರ ಅಬ್ಬರದ ಬಲದಿಂದ ಸಸೆಕ್ಸ್ ಸಸೆಕ್ಸ್ ತಂಡ 50 ಓವರ್‌ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 378 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನಟ್ಟಿದ ಸರ್ರೆ ಕೇವಲ 162 ರನ್‍ಗಳಿಗೆ ಆಲೌಟ್ ಆಗಿ 216 ರನ್‍ಗಳ ಹೀನಾಯ ಸೋಲು ಕಂಡಿತು. ಇದಕ್ಕೂ ಮುನ್ನ ಕಳೆದ ಶುಕ್ರವಾರ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ವಾರ್ವಿಕ್‌ಷೈರ್ ವಿರುದ್ಧ ನಡೆದ ಪಂದ್ಯದಲ್ಲೂ ಪೂಜಾರ ಆರ್ಭಟಿಸಿದಿದ್ದರು. ಪೂಜಾರ ಕೇವಲ 79 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದಂತೆ 107 ರನ್ ಸಿಡಿಸಿ ಬೌಲರ್‌ ಗಳನ್ನು ಕಂಗೆಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!