ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಜಿಲ್ಲಾ ಮೀಸಲು ಪಡೆ ಮತ್ತು ನಕ್ಸಲರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 10 ನಕ್ಸಲರು ಹತರಾಗಿದ್ದಾರೆ.
ಇನ್ಸ್‌ಪೆಕ್ಟರ್ ಜನರಲ್ ಬಸ್ತಾರ್, ಪಿ ಸುಂದರರಾಜ್ ಅವರು ಬೆಳವಣಿಗೆಯನ್ನು ಹಂಚಿಕೊಂಡಿದ್ದು “ಛತ್ತೀಸ್‌ಗಢದ ದಕ್ಷಿಣ ಸುಕ್ಮಾದಲ್ಲಿ ಡಿಆರ್‌ಜಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 10 ನಕ್ಸಲರು ಕೊಲ್ಲಲ್ಪಟ್ಟರು. ಐಎನ್‌ಎಸ್‌ಎಎಸ್, ಎಕೆ -47, ಎಸ್‌ಎಲ್‌ಆರ್ ಮತ್ತು ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಸುಕ್ಮಾ ಜಿಲ್ಲೆಯ ಕೊಂಟಾ ಮತ್ತು ಕಿಸ್ತಾರಾಮ್ ಪ್ರದೇಶ ಸಮಿತಿಯ ನಕ್ಸಲ್ ಸದಸ್ಯರ ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಜಿ ಮತ್ತು ಸಿಆರ್‌ಪಿಎಫ್ ಪಡೆಗಳು ಬೀಡು ಬಿಟ್ಟಿದ್ದವು. ಭೆಜ್ಜಿ ವ್ಯಾಪ್ತಿಯ ಕೊರಾಜುಗುಡ, ದಾಂತೇಸ್‌ಪುರಂ, ನಗರಂ ಮತ್ತು ಭಂಡಾರ್‌ಪದರ್ ಗ್ರಾಮಗಳ ಅರಣ್ಯ ಬೆಟ್ಟಗಳಲ್ಲಿ ಡಿಆರ್‌ಜಿ ತಂಡ ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಐಜಿ ಸುಂದರರಾಜ್ ತಿಳಿಸಿದ್ದಾರೆ.