ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಸೂಪರ್‌ಸ್ಟಾರ್ ನಾಗಚೈತನ್ಯ ಜೊತೆ ಡಿವೋರ್ಸ್ ಆದ ನಂತರ ಸಮಂತಾ ಹೆಸರು ಇನ್ಯಾರ ಜೊತೆಯಲ್ಲೂ ಕೇಳಿಸಿಲ್ಲ. ಆದರೆ ಈಗ ಬಾಲಿವುಡ್ ನಟನ ಜೊತೆ ಸಮಂತಾ ಡೇಟಿಂಗ್ ಮಾಡೋ ಸಾಧ್ಯತೆ ಇದೆ ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕಿದ್ದಾರೆ.
ಈ ನಟ ಬೇರ್ಯಾರೂ ಅಲ್ಲ, ಅರ್ಜುನ್ ಕಪೂರ್! ಹೌದು, ಈಗಷ್ಟೇ ನಟಿ ಮಲೈಕಾ ಅರೋರಾ ಜೊತೆ ಅರ್ಜುನ್ ಬ್ರೇಕಪ್ ಮಾಡಿಕೊಂಡಿದ್ದಾರೆ. ಇತ್ತ ಅವರ ಸಿನಿಮಾಗಳು ಕೂಡ ಫ್ಲಾಪ್ ಆಗುತ್ತಿವೆ. ಈ ರೂಮರ್ಸ್ ಹರಡೋಕೆ ಸಮಂತಾ ಮಾಡಿದ ಪೋಸ್ಟ್ ಹಾಗೂ ಅದಕ್ಕೆ ಅರ್ಜುನ್ ಕೊಟ್ಟ ಉತ್ತರ ಕಾರಣ ಎನ್ನಲಾಗಿದೆ.
ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪದ್ಯವನ್ನು ಹರಿಯಬಿಟ್ಟಿದ್ದಾರೆ. ಅದು ಅವರ ಫೇವರೆಟ್ ಪದ್ಯ ಎನ್ನಲಾಗಿದ್ದು, ಆ ಬಗ್ಗೆ ನಟಿ ಸಮಂತಾ ಅವರು ತುಂಬಾ ಸಾರಿ ಹೇಳಿಕೊಂಡಿದ್ದಾರೆ. ರುದ್ಯಾರ್ಡ್ ಕಿಪ್ಲಿಂಗ್ ಎನ್ನುವವರ ಆ ಪದ್ಯವನ್ನು ನಟಿ ಸಮಂತಾ ರುತ್ ಪ್ರಭು ತಮ್ಮ ಸೊಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದೇ ತಡ, ಬಾಲಿವುಡ್ ನಟ ಅರ್ಜುನ್ ಕಪೂರ್ ಆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.
ನಟಿ ಸಮಂತಾರ ಆ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ರಿಯಾಕ್ಟ್ ಮಾಡಿರುವ ನಟ ಅರ್ಜುನ್ ಕಪೂರ್ ‘ನಾನು ಈ ಪದ್ಯದ ಪ್ರಿಂಟನ್ನು ನನ್ನ ಗೋಡೆಯ ಮೇಲೆ ಹಾಕಿಕೊಂಡಿದ್ದೇನೆ. ನನಗೆ ಇನ್‌ಸ್ಪಿರೇಶನ್ ಬೇಕಾದಾಗಲೆಲ್ಲಾ ಇದು ನನಗೆ ತುಂಬಾನೇ ಸಹಾಯ ಮಾಡುತ್ತದೆ’ ಎಂದಿದ್ದಾರೆ ನಟ ಅರ್ಜುನ್ ಕಪೂರ್. ನಟಿ ಸಮಂತಾ ಪೋಸ್ಟ್‌ಗೆ ನಟ ಅರ್ಜುನ್ ಕಪೂರ್ ಮಾಡಿರುವ ರಿಪ್ಲೈ ನೋಡಿ ನೆಟ್ಟಿಗರು ಬೇರೆಯದೇ ಅರ್ಥ ಕಂಡುಕೊಂಡಿದ್ದಾರೆ.