ಛತ್ತೀಸ್​ಗಢ ಎನ್​ಕೌಂಟರ್​: 29 ನಕ್ಸಲರ ಹೊಡೆದುರುಳಿಸಿದ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆ ಎನ್‌ಕೌಂಟರ್‌ ನಡೆಸಿದ್ದು, 29 ನಕ್ಸಲರನ್ನು ಹೊಡೆದುರುಳಿಸಿದೆ.

ರಾಜ್ಯದಲ್ಲಿ ಈವರೆಗೂ ನಡೆದ ಅತಿದೊಡ್ಡ ಎನ್‌ಕೌಂಟರ್‌ ಇದಾಗಿದೆ. ನಕ್ಸಲ್‌ ಕಮಾಂಡರ್‌ಗಳನ್ನು ಹತ್ತಿಕ್ಕಲಾಗಿದ್ದು, ಛತ್ತೀಸ್‌ಗಢ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ನಕ್ಸಲರನ್ನು ಒಂದೇ ಬಾರಿಗೆ ಹೊಡೆದುರುಳಿಸಲಾಗಿದೆ.

ನಿಷೇಧಿತ ಸಿಪಿಐಯು ಉತ್ತರ ಬಸ್ತಾರ್‌ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಪ್ರದೇಶದಲ್ಲಿ ಗಸ್ತು ತಿರುಗುವ ವೇಳೆ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ತೀವ್ರ ಗುಂಡಿನ ಚಕಾಮಕಿ ನಡೆದಿದೆ.

ಸ್ಥಳದಿಂದ 29 ನಕ್ಸಲೀಯರ ಮೃತದೇಹ, ರೈಫಲ್‌ಗಳು ಹಾಗೂ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!