ಮರುಭೂಮಿ ದೇಶದ ಸುತ್ತಲೂ ಪ್ರವಾಹ, ಕೆರೆಯಂತಾದ ಏರ್ಪೋರ್ಟ್, ವಿಮಾನ ಹಾರಾಟ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧಾರಾಕಾರ ಮಳೆ ದುಬೈಗೆ ಅಪ್ಪಳಿಸಿದ್ದು, ಮರುಭೂಮಿ ದೇಶದಾದ್ಯಂತ ವ್ಯಾಪಕ ಪ್ರವಾಹವನ್ನು ಉಂಟುಮಾಡಿದೆ.

ದುಬೈನ ಮುಖ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೆರೆಯಂತಾಗಿತ್ತು. ನಿಲ್ದಾಣದಲ್ಲಿ ನೀರು ಹೊಳೆಯಂತೆ ಹರಿಯುತ್ತಿದ್ದರಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ದುಬೈನಲ್ಲಿ ಪ್ರವಾಹದ ದೃಶ್ಯಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ವಿಮಾನ ನಿಲ್ದಾಣದಿಂದ ಭಾರತ, ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವಾರು ದೇಶಗಳಿಗೆ ಏಪ್ರಿಲ್ 16 ರಂದು ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾಗಿರುವ ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್‌ನಲ್ಲಿ ಪ್ರವಾಹಕ್ಕೆ ಕಾರಣವಾದ ಭಾರೀ ಮಳೆಯಿಂದ ಪ್ರವಾಹಕ್ಕೆ ಒಳಗಾಯಿತು. ಒಮಾನ್‌ನಲ್ಲಿ ಭಾನುವಾರ ಮತ್ತು ಸೋಮವಾರ 18 ಮಂದಿ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!