BIRIYANI | ಮಾಡೋಕೆ ಸ್ವಲ್ಪ ಕಷ್ಟವಾದ್ರೂ ಹೈದರಾಬಾದಿ ಚಿಕನ್ ಬಿರಿಯಾನಿ ಟೇಸ್ಟ್ ಮಾತ್ರ ಸೂಪರ್!

  • ಚಿಕನ್‌ಗೆ ಮೊಸರು, ಉಪ್ಪು, ಖಾರದಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಸಾಂಬಾರ್ ಪುಡಿ, ಬಿರಿಯಾನಿ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಹಾಗೂ ಪುದೀನಾ ಹಾಕಿ ಎರಡು ಗಂಟೆ ಮ್ಯಾರಿನೇಟ್ ಮಾಡಿ
  • ನಂತರ ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಬಾಡಿಸಿ ಈರುಳ್ಳಿ ಎತ್ತಿಕೊಳ್ಳಿ
  • ನಂತರ ಇದೇ ಎಣ್ಣೆಗೆ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿ ಅದು ಡ್ರೈ ಆಗುವವರೆಗೂ ಬಾಡಿಸಿ.
  • ನಂತರ ಇನ್ನೊಂದು ಪಾತ್ರೆಯಲ್ಲಿ ನೀರು, ಹಸಿಮೆಣಸು, ಚಕ್ಕೆ, ಲವಂಗ, ಮರಾಠಿಮೊಗ್ಗು, ಚಕ್ರಮೊಗ್ಗು, ಪಲಾವ್ ಎಲೆ, ಉಪ್ಪು ಹಾಗೂ ಕಾಳುಮೆಣಸು ಹಾಕಿ ಕುದಿಸಿ, ನಂತರ ಅಕ್ಕಿ ಹಾಕಿ ರೈಸ್ ತಯಾರಿಸಿ
  • ನಂತರ ಬೆಂದ ಚಿಕನ್ ಮೇಲೆ ಕಂದು ಈರುಳ್ಳಿ ಹಾಕಿ ಬೇಯಿಸಿದ ಅನ್ನ ಹಾಕಿ ಇದರ ಮೇಲೆ ಸ್ವಲ್ಪ ಕೇಸರಿ ಹಾಲು, ಹಸಿಮೆಣಸಿನಕಾಯಿ ಹಾಕಿ, ಕಂದು ಈರುಳ್ಳಿ ಹಾಕಿ ಮುಚ್ಚಿಡಿ
  • ಸಣ್ಣ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿದರೆ ಹೈದರಾಬಾದ್ ಬಿರಿಯಾನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!