October 14, 2026
Wednesday, October 14, 2026
spot_img

2 ದಿನ ಸಿಗಲ್ಲ ಚಿಕನ್, ಮಟನ್: ಬೆಂಗಳೂರಿನ ಮಾಂಸದಂಗಡಿಗಳಿಗೆ ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋಳಿ ಮಾಂಸದ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ 5 ರೂ ಶುಲ್ಕ ವಿಧಿಸಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಕ್ರಮಕ್ಕೆ ಕೋಳಿ ಮಾಂಸ ಮಾರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಜಾರಿಯಲ್ಲಿರುವ ಶುಲ್ಕವನ್ನು ಹಿಂಪಡೆಯುವಂತೆ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್‌ ಸೆ.3 ಮತ್ತು 4ರಂದು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ನಿರ್ಧಾರದಿಂದ ಪ್ರತಿ ಅಂಗಡಿಗೆ ತಿಂಗಳಿಗೆ ಹೆಚ್ಚುವರಿಯಾಗಿ 5 ಸಾವಿರದಿಂದ 7 ಸಾವಿರದವರೆಗೆ ಹೊರೆ ಬೀಳಲಿದೆ.

ಆನ್​ಲೈನ್​ ನಲ್ಲೂ ವ್ಯತ್ಯಯ ಸಾಧ್ಯತೆ

ಎರಡು ದಿನ ಬಂದ್ ಇರುವ ಕಾರಣ ಆನ್‌ಲೈನ್ ಮಾಂಸ ವಿತರಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೇ ಎನ್ನಲಾಗಿದೆ.

Must Read