Friday, June 9, 2023

Latest Posts

ಚಿಕನ್ ತರದಿದ್ದಕ್ಕೆ ಕೊಲೆ, ಮೂವರು ಮಕ್ಕಳು ಅನಾಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಂಡ ಹೆಂಡತಿ ನಡುವೆ ಚಿಕನ್ ತರುವ ವಿಚಾರಕ್ಕೆ ಆರಂಭವಾದ ಜಗಳ, ಒಂದು ಜೀವ, ಜೀವನವನ್ನೇ ಅಂತ್ಯಮಾಡಿದೆ.

ಲಕ್ನೋದ ಆಲಿಘರ್‌ನಲ್ಲಿ ಗುಡ್ಡೋ ಹಾಗೂ ಪತಿ ಸಾಗಿರ್ ನಡುವೆ ಗಲಾಟೆಯಾಗಿದ್ದು, ಮಾತಿನ ಚಕಮಕಿಯಿಂದಾಗಿ ಕೋಪಗೊಂಡ ಸಾಗಿರ್ ಕೈಗೆ ಸಿಕ್ಕ ಚಾಕುವಿನಿಂದ ಪತ್ನಿಯ ಕುತ್ತಿಗೆ ಸೀಳಿದ್ದಾನೆ.

ಅಲ್ಲೇ ನಿಂತು ತಂದೆ ತಾಯಿ ಜಗಳ ನೋಡುತ್ತಿದ್ದ ಮೂವರು ಮಕ್ಕಳು ಕ್ಷಣಮಾತ್ರದಲ್ಲಿ ತಾಯಿಯನ್ನು ಕಳೆದುಕೊಂಡಿದ್ದಾರೆ. ರಕ್ತ ನೋಡಿ ಹೆದರಿದ ಮಕ್ಕಳು ಜೋರಾಗಿ ಕೂಗಿದ್ದು, ಅಕ್ಕಪಕ್ಕದ ಮನೆಯವರು ಮನೆಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೊಡ್ಡ ಮಗಳು ಮನೆಯಲ್ಲಿ ನಡೆದ ಜಗಳದ ಬಗ್ಗೆ ವಿವರಿಸಿದ್ದಾಳೆ. ಆರೋಪಿಯನ್ನು ವಶಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!