ಗೋರಖಪುರ ದೇಗುಲ ದಾಳಿಕೋರ ಅಬ್ಬಾಸಿ ಮಾನಸಿಕ ಅಸ್ವಸ್ಥತೆಗೆ ಪುರಾವೆಯಿಲ್ಲ! ಇದು ಮೂಲಭೂತವಾದಿಗಳ ಹೊಸ ನಾಟಕವೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಸ್ಲಿಂ ಯುವಕನೊಬ್ಬ ಇಸ್ಲಾಮಿಕ್‌ ಘೋಷಣೆಗಳನ್ನು ಕೂಗುತ್ತಾ ಕತ್ತಿ ಹಿರಿದು ಗೋರಖ್‌ಪುರ ದೇಗುಲದೊಳಕ್ಕೆ ನುಗ್ಗಲು ಯತ್ನಿಸಿದ್ದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅನಾಹುತವೊಂದನ್ನು ತಡೆದಿದ್ದರು. ಇದೀಗ ಭಯೋತ್ಪಾದಕ ನಿಗ್ರಹದಳವು ತಮ್ಮ ವಶದಲ್ಲಿರುವ ಅಹ್ಮದ್‌ ಮುರ್ತಾಜಾ ಅಬ್ಬಾಸಿಯನ್ನು ಗೋರಖ್‌ಪುರದ ಸದರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.
ಆತನ ಆರೋಗ್ಯ ಪರೀಕ್ಷೆ ನಡೆಸಿದ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಡಾ.ಜೆ.ಎಸ್‌.ಪಿ.ಸಿಂಗ್, ದಾಳಿ ಆರೋಪಿಯ ಮಾನಸಿಕ ಸ್ಥಿತಿ ಬಗ್ಗೆ ನಿರ್ಧಿಷ್ಟವಾಗಿ ಮಾಹಿತಿ ನೀಡಿಲ್ಲ. ಆದರೆ ʼಆತನಿಗೆ ಗಲಾಟೆ ವೇಳೆ ಕೈಗೆ ಪೆಟ್ಟಾಗಿತ್ತು, ಅದಕ್ಕೆ ಚಿಕಿತ್ಸೆ ನೀಡಿದ್ದೇವೆ. ಅದರ ಹೊರತಾಗಿ ಆತನಿಗೆ ಬೇರೇನೂ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆʼ. ಜೊತೆಗೆ ಆತನ ಮಾನಸಿಕ ಅಸ್ವಸ್ಥತೆ ಕುರಿತು ಖಚಿತ ಪುರಾವೆಗಳು ಸಿಕ್ಕಿಲ್ಲ ಎಂದಿದ್ದಾರೆ.
ಅಹ್ಮದ್ ಮುರ್ತಾಜಾ ಅಬ್ಬಾಸಿ ಕಳೆದ ಏಪ್ರಿಲ್ 3 ರಂದು ತನ್ನ ಧರ್ಮದ ಘೋಷಣೆಗಳನ್ನು ಕೂಗುತ್ತಾ ಗೋರಖನಾಥ ದೇವಾಲಯದ ಆವರಣವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ. ಅಲ್ಲದೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಆಯುಧದಿಂದ ಹಲ್ಲೆ ಮಾಡಿದ್ದ. ಪೊಲೀಸರು ತಕ್ಷಣವೇ ಆರೋಪಿಯನ್ನು ಸೆರೆಹಿಡಿದಿದ್ದರು. ಆ ಬಳಿಕ ಉತ್ತರ ಪ್ರದೇಶ ಸರ್ಕಾರವು ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ಕ್ಕೆ ಹಸ್ತಾಂತರಿಸಿತ್ತು.
ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಆತನ ತಂದೆ, ತಂದೆ ಮುರ್ತಾಜಾ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಅವನು ಅಪರಾಧ ಮಾಡುವ ಉದ್ದೇಶದೊಂದಿಗೆ ದೇವಾಲಯ ಪ್ರವೇಶಿಸಿರಲಿಲ್ಲ. ಆತನನ್ನು ಅಪರಾಧಿ ಎಂದು ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದರು.ಆದರೆ ವೈದ್ಯ ಡಾ.ಜೆ.ಎಸ್‌.ಪಿ.ಸಿಂಗ್ ಅವರು, ಮುರ್ತಾಜಾ ಮಾನಸಿಕ ಅಸ್ವಸ್ಥ ಎನ್ನುವುದನ್ನು ದೃಢವಾಗಿ ಹೇಳಲು ನಮಗೆ ನಿಶ್ಚಿತ ಪುರಾವೆಗಳು ಸಿಕ್ಕಿಲ್ಲ ಎಂದಿರುವುದನ್ನು ಗಮನಿಸಿದರೆ ಮೂಲಭೂತವಾಧಿಗಳು ಸಿಕ್ಕಿಬಿದ್ದಾಗ ʼಮಾನಸಿಕ ಅಸ್ವಸ್ಥತೆʼಯೆಂಬ ಹೊಸ ದಾಳವನ್ನು ಬಳಸುತ್ತಿದ್ದಾರೆಯೇ ಎಂಬ ಸಂಶಯಗಳನ್ನು ಹುಟ್ಟುಹಾಕುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!