Monday, October 2, 2023

Latest Posts

VIRAL VIDEO| ಮೆಟ್ರೋದಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್: ಚಿನ್ನಾರಿ ಡ್ಯಾನ್ಸ್‌ಗೆ ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ, ಮೆಟ್ರೋಗಳಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡುವ ಮೂಲಕ ಕೆಲವರು ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ. ಈ ನಡುವೆ ದೆಹಲಿ ಮೆಟ್ರೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಪ್ರದರ್ಶಿಸಿದ ನೃತ್ಯ ಎಲ್ಲರನ್ನು ರಂಜಿಸಿತು. ನೆಟ್ಟಿಗರು ಕೂಡ ಇಷ್ಟಪಟ್ಟಿದ್ದಾರೆ.

ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತದೆ. ಕೆಲವು ಸುದ್ದಿಗಳು ಸದಾ ವೈರಲ್ ಆಗುತ್ತಿರುತ್ತವೆ. ಇದುವರೆಗೂ ಪ್ರೇಮ ಜೋಡಿಗಳು ಚುಂಬನ, ಯುವತಿಯರ ಡ್ಯಾನ್ಸ್, ರೀಲುಗಳ ವಿಡಿಯೋಗಳ ಮೂಲಕ ಸದ್ದು ಮಾಡಿದ್ದವು. ಇವುಗಳಲ್ಲಿ ಹೆಚ್ಚಿನವು ಟಿಕೆಗೊಳಗಾದವುಗಳೇ ಹೆಚ್ಚು. ಅಂತಹ ಸಮಯದಲ್ಲಿ ಚಿನ್ನಾರಿ ನೀಲಿ ಬಣ್ಣದ ಉಡುಪಿನಲ್ಲಿ ಮಿನ್ನ ಮಿನ್ನ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದೆ. ಚಿನ್ನಾರಿ ತನ್ನ ಸುಂದರ ನೃತ್ಯದ ಕ್ಷಣಗಳಿಂದ ಎಲ್ಲರ ಮನ ಕದ್ದಳು. ಕಂಪಾರ್ಟ್‌ಮೆಂಟ್‌ನಲ್ಲಿದ್ದ ಪ್ರಯಾಣಿಕರೂ ಆಕೆಯ ನೃತ್ಯವನ್ನು ಆನಂದಿಸಿದರು.

https://www.instagram.com/reel/CsqBFZbAHNx/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!