ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಈ ಬಾರಿಯೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಷೇರುಗಳ ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕೆ ಮಸ್ಕ್ ಮೊದಲ ಸ್ಥಾನಕ್ಕೇರಿದ್ದಾರೆ.
ಅರ್ನಾಲ್ಟ್‌ನ ಎಲ್‌ಎಮ್‌ವಿಚ್ ಷೇರುಗಳು 2.6%ರಷ್ಟು ಕಡಿಮೆಯಾಗಿದೆ, ಕಳೆದ ಏಪ್ರಿಲ್‌ನಲ್ಲಿ ಶೇ.10ರಷ್ಟು ಕುಸಿತ ಕಂಡಿದ್ದು, ಒಂದೇ ದಿನದಲ್ಲಿ ಅರ್ನಾಲ್ಟ್‌ನ 11 ಶತಕೋಟಿ ಡಾಲರ್‌ನಷ್ಟು ಸಂಪತ್ತು ಕರಗಿದ್ದು, ಮಸ್ಕ್ ವಿಶ್ವದ ಮೊದಲ ಶ್ರೀಮಂತ ಎನಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹುಟ್ಟಿದ ಮಸ್ಕ್ ಸಣ್ಣ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯ ವಿಚ್ಛೇದನ ನೋಡಿದ್ದಾರೆ. ಏಕಾಂಗಿಯಾಗಿ ಬದುಕು ಕಟ್ಟಿಕೊಂಡ ಮಸ್ಕ್, ಪುಸ್ತಗಳನ್ನು ಓದುತ್ತಾ, ಸಂಶೋಧನೆ ಮಾಡುತ್ತಾ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ.
ಟೆಸ್ಲಾ ಷೇರುಗಳು ಒಂದು ತಿಂಗಳಳ್ಲಿ ಶೇ. 25ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಏಕಾಏಕಿ 29ಶತಕೋಟಿ ಡಾಲರ್ ಹೆಚ್ಚಳವಾಗಿದೆ.