ಪೆನ್‌ಡ್ರೈವ್‌ ಕೇಸ್‌ | ಲೈಂಗಿಕ ದೌರ್ಜನ್ಯಕ್ಕೆ ಅಪ್ರಾಪ್ತರ ಬಳಕೆ ಆಗಿಲ್ಲ ಎಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೈಂಗಿಕ ದೌರ್ಜನ್ಯ ಆರೋಪದಡಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಹೋರಾಡುತ್ತಿದ್ದಾರೆ. ಇದೀಗ ಒಂದು ವಿಷಯದಲ್ಲಿ ಮಾತ್ರ ಪ್ರಜ್ವಲ್‌ಗೆ ರಿಲೀಫ್‌ ಸಿಕ್ಕಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದ ಬೆನ್ನಲ್ಲೇ ಮಹಿಳಾ ಆಯೋಗ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಎಂಟ್ರಿ ಕೊಟ್ಟಿತ್ತು ಆದರೆ ಇದೀಗ ಈ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಅಪ್ರಾಪ್ತರ ಬಳಕೆ ಆಗಿಲ್ಲ ಎಂದು ಹೇಳಿದ್ದು, ಪ್ರಜ್ವಲ್‌ಗೆ ದೊಡ್ಡ ರಿಲೀಫ್‌ ಆಗಿದೆ.

ಒಂದು ಕಡೆ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರ ಪರವಾಗಿ ಮಹಿಳಾ ಆಯೋಗ ಫೀಲ್ಡಿಗೆ ಇಳಿದಿದ್ದರೆ, ಮತ್ತೊಂದು ಕಡೆ ಪ್ರಕರಣದಲ್ಲಿ ಅಪ್ರಾಪ್ತೆಯರು ಕೂಡ ಸಿಲುಕಿರಬಹುದು ಅನ್ನೋ ಅನುಮಾನ ಕೂಡ ಮಕ್ಕಳ ರಕ್ಷಣಾ ಆಯೋಗಕ್ಕೆ ಶುರುವಾಗಿತ್ತು. ಸದ್ಯ ಇದಕ್ಕೆ ಉತ್ತರ ಸಿಕ್ಕಿದ್ದು, ಇಲ್ಲಿ ಯಾವುದೇ ಅಪ್ರಾಪ್ತರ ಬಳಕೆಯಾಗಿಲ್ಲ ಎಂದು ಸ್ಪಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!