Sunday, March 26, 2023

Latest Posts

ಪುಟ್ಟ ಕಂಗಳಲ್ಲಿ ಆಕಾಶದೆತ್ತರದ ಕನಸು, ಏರ್‌ಶೋ ವೀಕ್ಷಿಸಿದ ಹಿಂದುಳಿದ ಸಮುದಾಯಗಳ ಮಕ್ಕಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರೋಪ್ಲೇನ್ ಇಷ್ಟು ದೊಡ್ಡದಾ?, ನಾನೂ ಪೈಲಟ್ ಆಗ್ತೀನಿ…

ಪುಟ್ಟ ಕಂಗಳ ಮುಗ್ಧ ಮಾತುಗಳಿವು.. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್‌ಶೋ ನಡೆಯುತ್ತಿದ್ದು, ಹಿಂದುಳಿದ ಸಮುದಾಯಗಳ 2,500 ಮಕ್ಕಳು ಏರ್ ಶೋ ವೀಕ್ಷಿಸಿದರು.

ರಾಜ್ಯದ ವಿವಿಧ ಭಾಗಗಳ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ, ಆರ್ಥಿಕವಾಗಿ ದುರ್ಬಲರಾದ ವರ್ಗಗಳಿಗೆ ಸೇರಿದ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏರ್ ಶೋ ಪ್ರದರ್ಶನ ವೀಕ್ಷಿಸಲು ಅವಕಾಶ ನೀಡಲಾಗಿದೆ.

ವಾಲ್ಮೀಕಿ ಆಶ್ರಮ ಶಾಲೆ, ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು ಏರ್‌ಶೋ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಏರ್ ಶೋ ನೋಡಿ ಮಕ್ಕಳು ಮರೆಯಲಾಗದ ಅನುಭವವನ್ನು ಜೊತೆಗೆ ಹೊತ್ತು ಹೊರಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!