Tuesday, March 28, 2023

Latest Posts

ಕಚ್ಚಾ ತೈಲ, ಟರ್ಬೈನ್ ಇಂಧನ ಮತ್ತು ಡೀಸೆಲ್ ಗಳ ದಿಢೀರ್‌ ಲಾಭದ ಮೇಲಿನ ತೆರಿಗೆ ಕಡಿತಗೊಳಿಸಿದ ಕೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಸರ್ಕಾರವು ಕಚ್ಚಾ ತೈಲ ಮತ್ತು ವಾಯುಯಾನ ಟರ್ಬೈನ್ ಇಂಧನ ಮತ್ತು ಡೀಸೆಲ್ ರಫ್ತುಗಳ ಮೇಲಿನ ದಿಢೀರ್‌ ಲಾಭದ ಮೇಲಿನ ತೆರಿಗೆ (ವಿಂಡ್‌ಫಾಲ್‌ ತೆರಿಗೆ)ಯನ್ನು ಕಡಿತಗೊಳಿಸಿದ್ದು ಗುರುವಾರದಿಂದ ಇದು ಜಾರಿಗೆ ಬರಲಿದೆ ಎಂದು ಅಧಿ ಸೂಚನೆ ಹೊರಡಿಸಲಾಗಿದೆ. ಕಚ್ಚಾ ತೈಲದ ಮೇಲಿನ ದಿಢೀರ್‌ ಲಾಭದ ಮೇಲಿನ ತೆರಿಗೆಯನ್ನು ಪ್ರತಿ ಟನ್‌ಗೆ 5,050 ರೂಪಾಯಿಗಳಿಂದ 4,350 ರೂಪಾಯಿಗಳಿಗೆ (52.60ಡಾಲರ್) ಇಳಿಕೆ ಮಾಡಲಾಗಿದೆ.

ವಿಮಾನಯಾನ ಟರ್ಬೈನ್ ಇಂಧನದ ಮೇಲಿನ ರಫ್ತು ತೆರಿಗೆಯನ್ನು ಲೀಟರ್‌ಗೆ 6 ರೂಪಾಯಿಗಳಿಂದ 1.50 ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ ಮತ್ತು ಡೀಸೆಲ್ ಮೇಲಿನ ರಫ್ತು ತೆರಿಗೆಯನ್ನು ಲೀಟರ್‌ಗೆ 7.50 ರೂಪಾಯಿಗಳಿಂದ 2.50 ರೂಪಾಯಿಗಳಿಗೆ ಇಳಿಸಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ಜುಲೈನಲ್ಲಿ ಭಾರತವು ಕಚ್ಚಾ ತೈಲ ಉತ್ಪಾದಕರ ಮೇಲೆ ದಿಢೀರ್‌ ಲಾಭದ ಮೇಲಿನ ತೆರಿಗೆಯನ್ನು ವಿಧಿಸಿತ್ತು ಮತ್ತು ಗ್ಯಾಸೋಲಿನ್, ಡೀಸೆಲ್ ಮತ್ತು ವಾಯುಯಾನ ಇಂಧನದ ರಫ್ತುಗಳ ಮೇಲೆ ತೆರಿಗೆಗಳನ್ನು ವಿಧಿಸಿತ್ತು.

ದೇಶೀಯ ಬಳಕೆಯಲ್ಲಿ ಸ್ಥಿರವಾದ ಹೆಚ್ಚಳದ ಮಧ್ಯೆ ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ಇಂಧನವನ್ನು ರಿಯಾಯಿತಿಯಲ್ಲಿ ಸಂಗ್ರಹಿಸುವುದನ್ನು ಮುಂದುವರೆಸಿದ್ದರಿಂದ ಕಡಿತಗಳು ಈ ಕಡಿತಗಳು ಕಂಡುಬಂದಿವೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!