ದುಡಿದು ಹೆತ್ತವರನ್ನೇ ಸಾಕುತ್ತಿದ್ದಾರೆ ಮಕ್ಕಳು, ಆಫ್ಘನ್‌ನಲ್ಲಿ ಶೋಚನೀಯ ಪರಿಸ್ಥಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಫ್ಗಾನಿಸ್ತಾನದ ಸ್ಥಿತಿ ಹದಗೆಟ್ಟಿದೆ. ಒಂದು ಹೊತ್ತಿನ ಊಟಕ್ಕೂ ಜನ ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಎಲ್ಲೆಡೆ ಬಡತನ ಎದ್ದು ಕಾಣುತ್ತಿದೆ. ಶಾಲೆಗೆ ಹೋಗಿ, ಬೇರೆ ಮಕ್ಕಳೊಂದಿಗೆ ಆಟವಾಡುತ್ತಾ ತಮ್ಮ ಬಾಲ್ಯ ಕಳೆಯಬೇಕಿದ್ದ ಮಕ್ಕಳು ಇದೀಗ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಬಡತನ ನೋಡಲಾಗದೆ, ಅತ್ಯಂತ ಕಠಿಣ ಕೆಲಸಗಳಿಗೂ ‘ಇಲ್ಲಾ’ ಎನ್ನದೇ ಎಲ್ಲವನ್ನೂ ಮಾಡುತ್ತಿದ್ದಾರೆ.

COVID-19 may push millions more children into child labour – ILO and UNICEFಘೋರ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿನ ಪ್ರದೇಶದ ಮಕ್ಕಳು ಇಡೀ ಕುಟುಂಬದ ಆರ್ಥಿಕ ಸಹಾಯಕ್ಕೆ ನಿಂತಿದ್ದಾರೆ. ಕೆಲವು ಮನೆಗಳಲ್ಲಿ ಪೋಷಕರು ಶಾಲೆ ಬಿಡಿಸಿ, ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.
ಬಾಲ್ಯದ ಸವಿನಿದ್ದೆ ಸವಿಯುವ ಬದಲು ಮಕ್ಕಳು ಮುಂಜಾನೆಯಿಂದಲೇ ಕೆಲಸ ಮಾಡುತ್ತಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿವೆ.

AFGHANISTAN As opium cultivation rises in Afghanistan, children are  recruited by drug dealersಮೊಹಮದ್ ಹಸನ್ ಎನ್ನುವ ಬಾಲಕ ಹರಿರೋಡ್ ನದಿಯ ದಡದಲ್ಲಿ ತನ್ನ ಅಣ್ಣ ಜತೆ ಸೇರಿ ಕಾರ್ ತೊಳೆಯುವ ಕೆಲಸ ಮಾಡುತ್ತಾನೆ. ಅಫ್ಘಾನ್‌ನಲ್ಲಿ ಕೊರೆಯುವ ಚಳಿಯಿದೆ. ಈ ಚಳಿಯಲ್ಲಿ ನದಿ ನೀರು ಮುಟ್ಟಲಾಗದಷ್ಟು ತಣ್ಣಗಿರುತ್ತದೆ. ಈ ನೀರಿನಲ್ಲಿ ಮಕ್ಕಳು ಕಾರ್ ಶುಚಿಗೊಳಿಸಿ ದಿನಕ್ಕೆ70-140 ರೂ. ದುಡಿಯುತ್ತಾರೆ. ಇದರಿಂದ ಹೆತ್ತವರನ್ನು ಸಾಕುತ್ತಾರೆ.
FEATURE - Child labour helps war-torn Afghan families survive | Reutersಈ ಬಗ್ಗೆ ಹಸನ್ ಮಾತನಾಡಿದ್ದು, ಮನೆಯಲ್ಲಿ ಊಟ ಇಲ್ಲ, ಈ ಚಳಿಯಲ್ಲಿ ಬಂದು ಕಾರ್ ತೊಳೆದರೆ ನಮ್ಮ ಆರೋಗ್ಯವೂ ಹದಗೆಡುತ್ತದೆ. ಆದರೆ ಇದು ಅನಿವಾರ್ಯ, ಶಾಲೆಗೆ ಹೋದರೆ ಹಣ ಹೇಗೆ ಹುಟ್ಟತ್ತೆ? ಎಂದು ಅಳಲು ತೋಡಿಕೊಂಡಿದ್ದಾನೆ.

ಇನ್ನು ಅಫ್ಘಾನ್‌ನ ಬಾಲಕಿಯರು ಎಲ್ಲಿಯೂ ಕೆಲಸ ಸಿಗದೇ ಇದೀಗ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಇನ್ನು 12 ವರ್ಷದ ಅಬ್ದುಲ್ ರಫೀಕ್ ಎನ್ನುವ ಬಾಲಕ ಲೋಹದ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ ಕಡಿಮೆ ಹಣ ದೊರೆತರೂ ತನ್ನ ತಮ್ಮ- ತಂಗಿಗೆ ಬ್ರೆಡ್ ಕೊಳ್ಳಲು ಇಷ್ಟು ಹಣ ಬೇಕು. ಇದಕ್ಕಿಂತ ಹೆಚ್ಚು ಇನ್ನೇನೂ ಕೊಳ್ಳಲು ಆಗುವುದಿಲ್ಲ ಎನ್ನುತ್ತಾನೆ.

ಅಫ್ಘಾನ್‌ನಲ್ಲಿ ಮಕ್ಕಳ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಎನ್‌ಜಿಒಗಳ ಜತೆ ಸೇರಿ ಮಕ್ಕಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!