ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಅವರ ಜನ್ಮದಿನವಾಗಿದ್ದು, ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಾಯಾವತಿ ಅವರ ಜನ್ಮದಿನವನ್ನು ಪಕ್ಷದ ಕಾರ್ಯಕರ್ತರು ಜನಕಲ್ಯಾಣಕಾರಿ ದಿನ ಎಂದು ಆಚರಿಸಲಿದ್ದಾರೆ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಅವರ ಹೋರಾಟದ ಬದುಕಿನ ಬ್ಲ್ಯೂ ಬುಕ್ ಮತ್ತು ಬಿಎಸ್‌ಪಿ ಚಳವಳಿಯ ಪಯಣ ಭಾಗ-17 ಮತ್ತು ಇಂಗ್ಲಿಷ್ ಆವೃತ್ತಿಯನ್ನೂ ಬಿಡುಗಡೆ ಮಾಡಲಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ದಟ್ಟವಾಗಿದೆ.