ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ: ನಟಿ ರಾಕುಲ್ ಪ್ರೀತ್ ಸಿಂಗ್ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೌತ್ ಮತ್ತು ಬಾಲಿವುಡ್ ಸಿನಿಮಾದಲ್ಲಿ ತಮನ್ನು ತೊಡಗಿಸಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಸಕ್ಸಸ್‌ಫುಲ್ ನಟಿಯಾಗಿ ಹೊರಹೊಮ್ಮಿದ್ದಾರೆ.

ಇದೀಗ ಛತ್ರಿವಾಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇದು ಮಹಿಳಿಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಇರುವ ಸಿನಿಮಾ ಇದಾಗಿದೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನಟಿ ರಾಕುಲ್, ಶಾಲೆಗಳಲ್ಲಿ ಲೈಂಗಿಕ ಶೀಕ್ಷಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ. ನಾವು ಎಲ್ಲೋ ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಶಾಲೆಗಳಲ್ಲಿ ಕಡ್ಡಾಯವಾಗಬೇಕು ಎನ್ನುವುದು ಈ ಸಿನಿಮಾ ಹೇಳುತ್ತದೆ. ಇದು ಕೂಡ ಪಠ್ಯಕ್ರಮದ ಭಾಗವಾಗಲು ಒಂದು ಕಾರಣವಿದೆ. ಇದು ಮುಖ್ಯ ಎಂದು ನಾನು ಯೋಚಿಸುತ್ತೇನೆ’ ಎಂದು ಹೇಳಿದರು.

ಲೈಂಗಿಕ ಶಿಕ್ಷಣ ವ್ಯಕ್ತಿಯ ಸ್ವಾಭಾವಿಕ ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಅದರಿಂದ ಓಡಿಹೋಗಲು ಸಾಧ್ಯವಿಲ್ಲ. ಅಂತಿಮವಾಗಿ ಇದು ಜೀವಶಾಸ್ತ್ರ ಮತ್ತು ವಿಜ್ಞಾನ ಹಾಗೂ ಆರೋಗ್ಯಕ್ಕೂ ಸಂಬಂಧಿಸಿದೆ ಎಂದು ಹೇಳಿದರು.

13-14ನೇ ವಯಸ್ಸಿನ ಮಕ್ಕಳು ಪ್ರೌಢಾವಸ್ಥೆ ತಲುಪಿದ ಮಕ್ಕಳು, ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ತಿಳಿದುಕೊಳ್ಳಬೇಕಾದ ಸಮಯವಾಗಿದೆ. ಆಗ ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!