ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ: ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕುಸ್ತಿ ಒಕ್ಕೂಟ (Wrestling Federation Of India) ಮಹಿಳಾ ಕುಸ್ತಿಪಟುಗಳಿಗೆ (Woman Wrestler) ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. WFI ಅಧಿಕಾರಿಗಳು ಅಥ್ಲೀಟ್‌ಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಲ್ಲಾ ಅಗ್ರ ಕುಸ್ತಿಪಟುಗಳು ಮುಕ್ತ ಸಮರ ಸಾರಿದ್ದಾರೆ.

ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ .

ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಅವರಂತಹ ದೊಡ್ಡ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿದ್ದು, ಈ ವೇಳೆ ಮಾತನಾಡಿದ ವಿನೇಶ್ ಫೋಗಟ್, ಡಬ್ಲ್ಯುಎಫ್‌ಐನಿಂದ ನಾನು ಸಾಕಷ್ಟು ತುಳಿತಕ್ಕೊಳಗಾಗಿದ್ದು, ಅವರ ಕಿರುಕುಳದಿಂದ ಆತ್ಮಹತ್ಯಗೆ ಯತ್ನಿಸಿದ್ದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅವರು ಹಲವು ಹುಡುಗಿಯರನ್ನು ದೈಹಿಕವಾಗಿ ನಿಂದಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಸೋಲಿನ ನಂತರ ಡಬ್ಲ್ಯುಎಫ್‌ಐ ಅಧ್ಯಕ್ಷರು ನನ್ನನ್ನು ನಕಲಿ ನಾಣ್ಯ ಎಂದು ಕರೆದಿದ್ದರು. ಅಲ್ಲದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇವರ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆಗೆ ಚಿಂತಿಸಿದ್ದೆ ಎಂದಿದ್ದಾರೆ. ಯಾವುದೇ ಕುಸ್ತಿಪಟುವಿಗೆ ಏನಾದರೂ ಆದರೆ, ಅದಕ್ಕೆ ಡಬ್ಲ್ಯುಎಫ್‌ಐ ಅಧ್ಯಕ್ಷರೇ ನೇರ ಹೊಣೆಯಾಗಿರುತ್ತಾರೆ ಎಂದು ವಿನೇಶ್ ಫೋಗಟ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಫೆಡರೇಶನ್‌ನ ಫೇವರಿಟ್‌ ಆಗಿರುವ ಕೆಲವು ಕೋಚ್‌ಗಳು ಮಹಿಳಾ ಕೋಚ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅಲ್ಲದೆ ಅವರು ಹುಡುಗಿಯರನ್ನು ದೈಹಿಕವಾಗಿ ಹಿಂಸಿಸುತ್ತಾರೆ. ಸ್ಪೀಕರ್ ಕೂಡ ಅನೇಕ ಹುಡುಗಿಯರ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಾರೆ.ಅಲ್ಲದೆ ಫೆಡರೇಶನ್ ನಮ್ಮ ವೈಯಕ್ತಿಕ ಜೀವನದಲ್ಲಿಯೂ ಹಸ್ತಕ್ಷೇಪ ಮಾಡುತ್ತಿದೆ. ನಾವು ಒಲಿಂಪಿಕ್ಸ್‌ಗೆ ಹೋದಾಗ ನಮಗೆ ಫಿಸಿಯೋ ಅಥವಾ ತರಬೇತುದಾರರನ್ನು ಒದಗಿಸಿರಲಿಲ್ಲ. ನಾವು ಈ ಕ್ರಮದ ವಿರುದ್ಧ ಧ್ವನಿ ಎತ್ತಿದಾಗ, ನಮಗೆ ಬೆದರಿಕೆ ಹಾಕಲಾಯಿತು ಎಂದಿದ್ದಾರೆ.
ಈ ವಿಚಾರದಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪವನ್ನು ಕೋರಿದ್ದಾರೆ.

ದೈಹಿಕ ದೌರ್ಜನ್ಯ ಪ್ರಕರಣ ನಡೆದಿಲ್ಲ: ಬ್ರಿಜ್ ಭೂಷಣ್ ಶರಣ್ ಸಿಂಗ್
ಇತ್ತ ಕುಸ್ತಿಪಟುಗಳು ಮಾಡುತ್ತಿರುವ ಆರೋಪಗಳನ್ನು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಒಂದೇ ಒಂದು ದೈಹಿಕ ದೌರ್ಜನ್ಯ ಪ್ರಕರಣ ನಡೆದಿಲ್ಲ. ಅಂತಹ ಘಟನೆಗಳು ನಡೆದಿದ್ದರೆ ನಾನು ನೇಣು ಹಾಕಿಕೊಳ್ಳುತ್ತಾನೆ. ಧರಣಿ ಕುಳಿತ ಕುಸ್ತಿಪಟುಗಳು ಯಾರೂ ಕೂಡ ಒಲಿಂಪಿಕ್ಸ್ ನಂತರ ಯಾವುದೇ ರಾಷ್ಟ್ರೀಯ ಟೂರ್ನಿಯಲ್ಲಿ ಆಡಲು ಬಂದಿಲ್ಲ ಎಂಬ ಆರೋಪವನ್ನು ಕುಸ್ತಿಪಟುಗಳ ಮೇಲೆಯೇಬ್ರಿಜ್ ಭೂಷಣ್ ಶರಣ್ ಸಿಂಗ್ ಹೊರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!