ಸೂರ್ಯ ಸ್ನಾನ, ರೈತರ ಆಹಾರ ಪದ್ಧತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು: ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳು ಸೂರ್ಯ ಸ್ನಾನ ಹಾಗೆಯೇ ರೈತರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಬೆಳಗ್ಗೆ ಹೊಟ್ಟ ತುಂಬಾ ಊಟ ಮಾಡುತ್ತಾರೆ, ಆಮೇಲೆ ಕೆಲಸ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಹೊಟ್ಟೆ ತುಂಬಾ ಊಟ ಇದು ಮನಸ್ಸನ್ನು ಕೂಡ ಶಾಂತವಾಗಿರುವುದಷ್ಟೇ ಅಲ್ಲದೆ ಆರೋಗ್ಯವನ್ನು ಕೂಡ ಉತ್ತಮ ರೀತಿಯಲ್ಲಿ ಕಾಪಾಡುತ್ತದೆ ಎಂದಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಸೂರ್ಯನ ಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು, ಬೆಳಿಗ್ಗೆ ಬೇಗ ಹೋಗಿ ಬಿಸಿಲಿನಲ್ಲಿ ಕುಳಿತುಕೊಳ್ಳಿ. ನಿಮ್ಮ ದೇಹದ ಹೆಚ್ಚಿನ ಭಾಗವನ್ನು ಸೂರ್ಯನ ಬೆಳಕಿಗೆ ಒಡ್ಡಲು ಪ್ರಯತ್ನಿಸಿ. ಇದಲ್ಲದೆ, ದೈಹಿಕ ಪೋಷಣೆಯ ಮಹತ್ವವನ್ನು ವಿವರಿಸುತ್ತಾ, ಗೋಧಿ, ರಾಗಿ, ಅಕ್ಕಿ, ಎಲ್ಲವನ್ನೂ ತಿನ್ನಿರಿ, ದಟ್ಟವಾದ ಮರದ ಕೆಳಗೆ ನಿಂತು ಆಳವಾದ ಉಸಿರನ್ನು ತೆಗೆದುಕೊಳ್ಳಿ ಎಂದರು.

ಕಳೆದ ಬಾರಿ 30 ಅಂಕಗಳನ್ನು ಪಡೆದಿದ್ದರೆ, ಈ ಬಾರಿ 35 ಅಂಕಗಳನ್ನು ಪಡೆಯಬೇಕು ಎಂದು ನೀವು ಯೋಚಿಸಬೇಕು, ನೀವು ಕ್ರಮೇಣ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಿಕೊಳ್ಳಬೇಕು. ಪೋಷಕರು ಸಹ ತಮ್ಮ ಮಕ್ಕಳ ಕೌಶಲ್ಯಗಳ ಬಗ್ಗೆ ಗಮನ ಹರಿಸಬೇಕು. ಮಕ್ಕಳು ದುಃಖಿತರಾದರೆ ಮತ್ತು ದಣಿದಿದ್ದರೆ ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನಿಸಿದರು.

ಪ್ರತಿಯೊಬ್ಬರಿಗೂ 24 ಗಂಟೆಗಳಿರುತ್ತವೆ. ಕೆಲವರು ಅನಗತ್ಯ ವಿಷಯಗಳಲ್ಲಿ ಅದನ್ನು ವ್ಯರ್ಥ ಮಾಡುತ್ತಾರೆ. ಕೆಲವರು ತಮ್ಮ ಗುರಿಯತ್ತ ಗಮನಹರಿಸುತ್ತಾರೆ ಮತ್ತು ಅದಕ್ಕಾಗಿ ಶ್ರಮಿಸುತ್ತಾರೆ. ಈ ಸಮಯವನ್ನು ಸಾಧ್ಯವಾದಷ್ಟು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ನಾಳೆ ನಾನು ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮಾಡಿ.

ನಂತರ ಮರುದಿನ ನೀವು ಏನು ಮಾಡಿದ್ದೀರಿ ಮತ್ತು ಏನು ಮಾಡಲಿಲ್ಲ ಎಂದು ನೋಡಿ. ನಾವು ನಮ್ಮ ಹೆಚ್ಚಿನ ಸಮಯವನ್ನು ನಮ್ಮ ನೆಚ್ಚಿನ ವಿಷಯದ ಮೇಲೆ ಕಳೆಯುತ್ತೇವೆ. ಇತರ ವಿಷಯಗಳಿಗೂ ಸಮಯ ನೀಡಿ ಎಂದು ಸಲಹೆ ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!