ಮಕ್ಕಳು ಅಂತ್ಯಕ್ರಿಯೆಗೂ ಬರೋದು ಬೇಡ, ಆಸ್ತಿಯೆಲ್ಲಾ ಸರ್ಕಾರಕ್ಕೆ ಬರೆದ ವೃದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐವರು ಮಕ್ಕಳಿದ್ದಾರೆ, ಕಷ್ಟಕ್ಕೆ ಒಬ್ಬರೂ ಬಂದಿಲ್ಲ ನನ್ನ ಆಸ್ತಿ ಒಳ್ಳೆ ಕೆಲಸಕ್ಕೆ ಬಳಕೆಯಾಗಲಿ..

ಮುಜಾಫರ್‌ನಗರದ ನಿವಾಸಿಯಾದ ನಾಥು ಸಿಂಗ್‌ಗೆ 85 ವರ್ಷ, ಮೊಮ್ಮಕ್ಕಳು, ಮರಿಮಕ್ಕಳು ಜತೆ ಆಟವಾಡಿಕೊಂಡು ಹಾಯಾಗಿ ಕಾಲ ಕಳೆಯಬೇಕಿದ್ದವರು ವೃದ್ಧಾಶ್ರಮದಲ್ಲಿ ಕೊರಗುತ್ತಿದ್ದಾರೆ.

ವೃದ್ಧಾಶ್ರಮದಲ್ಲಿ ಉಳಿದು ಆರು ತಿಂಗಳಾದರೂ ಪುತ್ರಿಯರು, ಪುತ್ರ ಒಂದು ಬಾರಿಯೂ ನೋಡಲು ಬಂದಿಲ್ಲ ಎಂಬ ಬೇಸರದಲ್ಲಿ ನಾಥು ಸಿಂಗ್ ತಮ್ಮ 1.5 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಉತ್ತರಪ್ರದೇಶ ಸರ್ಕಾರಕ್ಕೆ ಬರೆದಿದ್ದಾರೆ.

ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದು, ತಮ್ಮ ಮಕ್ಕಳು ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಬಾರದು ಎಂದು ವಿಲ್‌ನಲ್ಲಿ ಬರೆದಿದ್ದಾರೆ.

ಶಾಲಾ ಶಿಕ್ಷಕರಾದ ನಾಥು ಸಿಂಗ್‌ಗೆ ಐವರು ಮಕ್ಕಳು ಮಗ ಹಾಗೂ ನಾಲ್ವರು ಪುತ್ರಿಯರು. ಪತ್ನಿ ಇಹಲೋಕ ತ್ಯಜಿಸಿದ ನಂತರ ಒಬ್ಬಂಟಿಯಾದ ನಾಥು ಸಿಂಗ್ ತಮ್ಮ ಗ್ರಾಮದ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದರು. ಆರು ತಿಂಗಳು ಕಾದರೂ ಒಬ್ಬರೂ ಭೇಟಿ ನೀಡದ್ದಕ್ಕೆ ಬೇಸರಿಸಿಕೊಂಡು ವಿಲ್ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!